Breaking News

ಭ್ರಷ್ಟಾಚಾರ ಸಾಭೀತಾದ ಹಿನ್ನೆಲೆ: ಗ್ರಾ. ಪಂ ಸೇವೆಯಿಂದ ಪಿಡಿಓ ವಜಾ

Spread the love

ರಾಯಚೂರು: ಭ್ರಷ್ಟಾಚಾರ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲೆಯ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮ‌ ಪಂಚಾಯಿತಿ ಪಿಡಿಓ ಶರಣಪ್ಪ ಸರ್ಕಾರಿ ಸೇವೆಯಿಂದ ವಜಾಗೊಂಡಿದ್ದಾರೆ.

2010-11 ರ ಅವಧಿಯಲ್ಲಿ ಮಾನ್ವಿ ತಾಲೂಕಿನ ಕಪಗಲ್ ಗ್ರಾಪಂ‌ ಪಿಡಿಓ ಆಗಿದ್ದಾಗ ನಡೆದ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಇದೀಗ ಕ್ರಮ ಕೈಗೊಂಡಿದ್ದು ಪಿಡಿಓ ಶರಣಪ್ಪ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

ನಿಯಮ ಉಲ್ಲಂಘಿಸಿ ಸರ್ಕಾರಕ್ಕೆ 34,77,999 ರೂ. ನಷ್ಟ ಉಂಟು ಮಾಡಿದ ಆರೋಪ ಪ್ರಕರಣದಲ್ಲಿ ಭ್ರಷ್ಟಾಚಾರ ತನಿಖೆಯಲ್ಲಿ ಧೃಡಪಟ್ಟ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಸಿಇಓ ನೂರ್ ಜಹಾರ್ ಖಾನ್ಂ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪಿಡಿಓ ವಿರುದ್ಧ ಪ್ರಕರಣ ದಾಖಲಿಸಿ, ಭ್ರಷ್ಟಾಚಾರದ ಹಣ ವಸೂಲಿಗೂ ಸೂಚಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಯಮ ಮೀರಿ ಕ್ರಿಯಾ ಯೋಜನೆ ತಯಾರಿಕೆ, ಕಾಮಗಾರಿ ಅನುಷ್ಠಾನ. ಕ್ರಿಯಾ ಯೋಜನೆಯಲ್ಲಿ ಇಲ್ಲದ ಜಮೀನುಗಳಲ್ಲಿ ಕಾಮಗಾರಿ ಅನುಷ್ಠಾನ ಹಾಗೂ ಕ‌ಡಿಮೆ ಕೆಲಸ ಮಾಡಿ ಹೆಚ್ಚು ಹಣ ಡ್ರಾ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.


Spread the love

About Laxminews 24x7

Check Also

ಮಂತ್ರಾಲಯದಲ್ಲಿ ರಾಘವೇಂದ್ರ ರಾಜಕುಮಾರ್‌ಗೆ ಫ್ಲೋರಿಡಾ ವಿವಿ ಗೌರವ ಡಾಕ್ಟರೇಟ್ ಪ್ರದಾನ – ಶ್ರೀಗಳಿಂದ ಸನ್ಮಾನ

Spread the loveರಾಯಚೂರು: ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಸಂಭ್ರಮ ಮನೆಮಾಡಿದ್ದು, ಮಠದ ಕಾರ್ಯಕ್ರಮದಲ್ಲಿ ಅಮೆರಿಕದ ಫ್ಲೋರಿಡಾ ವಿವಿಯ ಗೌರವ ಡಾಕ್ಟರೇಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ