ಬೆಂಗಳೂರು: ಪಿಎಸ್‌ಐ ನೇಮಕ ಅಕ್ರಮ “ಸಮಾಜದ ಪಾಲಿಗೆ ಭಯೋತ್ಪಾದಕ ಕೃತ್ಯ’ ಎಂದು ತೀಕ್ಷ್ಣ ವಾಗಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇದರಲ್ಲಿ ಭಾಗಿಯಾದವರು ಮತ್ತು ಅದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಕಾನೂನು ರೀತಿ ಶಿಕ್ಷೆ ಆಗಬೇಕು ಎಂದು ಹೇಳಿದೆ.
ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಎಡಿಜಿಪಿ ಅಮೃತ್ ಪೌಲ್ ಬಂಧನಾನಂತರದ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾ| ಎಚ್.ಪಿ. ಸಂದೇಶ್ ಈ ಅಭಿ ಪ್ರಾಯ ಪಟ್ಟರು.
ಪ್ರಕರಣದ ಆರೋಪಿಗಳಾದ ಸಿ.ಎನ್. ಶಶಿಧರ್ ಮತ್ತು ಇತರರು ಸಲ್ಲಿಸಿರುವ ಜಾಮೀನು ಅರ್ಜಿ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾ| ಎಚ್.ಪಿ. ಸಂದೇಶ್, ನೇಮಕಾತಿಯಲ್ಲಿ ಅಕ್ರಮ ಸಮಾಜಕ್ಕೆ ದೊಡ್ಡ ಅಪಾಯ.
25 ಕೋ.ರೂ. ಉನ್ನತ ಅಧಿಕಾರಿ ಪಾಲು! :
ಹಗರಣದಲ್ಲಿ 25 ಕೋ.ರೂ. ಉನ್ನತ ಪೊಲೀಸ್ ಅಧಿಕಾರಿ ಒಬ್ಬರ ಕೈಸೇರಿರುವ ಸ್ಫೋಟಕ ಸಂಗತಿ ಅಮೃತ್ ಪೌಲ್ ವಿಚಾ ರಣೆ ವೇಳೆ ಬೆಳಕಿಗೆ ಬಂದಿದೆ. ಅಕ್ರಮದ ಇಂಚಿಂಚು ಮಾಹಿತಿ ಕಲೆ ಹಾಕ ಲಾಗುತ್ತಿದ್ದು, ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಕೋಟ್ಯಂತರ ರೂ. ಪೈಕಿ 25 ಕೋ.ರೂ. ಈ ಉನ್ನತ ಪೊಲೀಸ್ ಅಧಿ ಕಾರಿ ಪಾಲಾಗಿದೆ ಎಂಬ ಅಂಶವನ್ನು ಪೌಲ್ ಬಾಯ್ಬಿಟ್ಟಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಶಾಮೀಲಾಗಿರುವ ಉನ್ನತ ಪೊಲೀಸ್ ಅಧಿಕಾರಿ ಮತ್ತು ಪ್ರಭಾವಿ ಗಳು ತಮ್ಮ ಹೆಸರು ಬಹಿರಂಗ ವಾಗಬಾರದು ಎಂದು ಪೌಲ್ ಬಂಧನವಾಗು ವಂತೆ ಮಾಡಿ ದ್ದಾರೆ ಎಂದೂ ಹೇಳಲಾಗುತ್ತಿದೆ.
ನೈಜ ಸಂತ್ರಸ್ತರಿಗೆ ನ್ಯಾಯ ಒದಗಿ ಸುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುವುದು ನ್ಯಾಯಾಲಯದ ಉದ್ದೇಶ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಸಂಕೋಲೆಗಳಿಂದ ತಪ್ಪಿಸಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟರು.
ತನಿ ಖಾಧಿಕಾರಿಗಳ ಪ್ರಕಾರ 32 ಮಂದಿ ಮಾತ್ರ ಕಳಂಕಿತರಿದ್ದಾರೆ, ಆದರೆ ಆಯ್ಕೆಯಾದ ಎಲ್ಲರನ್ನೂ ಸಂಶಯ ದಿಂದ ನೋಡಲಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಪಿಎಸ್‌ಐ ನೇಮಕಕ್ಕೆ 50 ಸಾವಿರ ಮಂದಿ ಪರೀಕ್ಷೆ ಬರೆದಿದ್ದರು. ಅವರೆಲ್ಲರೂ ನೊಂದವರು ಮತ್ತು ಸಂತ್ರಸ್ತರು. ಅಕ್ರಮದಲ್ಲಿ ಮಧ್ಯವರ್ತಿಗಳ ಪ್ರಧಾನ ಪಾತ್ರವಿದೆ ಎಂದರು.
ವರದಿ ಸಲ್ಲಿಸಲು ಸೂಚನೆ :
ಸಿಐಡಿ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಅಮೃತ್ ಪೌಲ್ ಬಂಧನ ವಾದ ಅನಂತರದ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಿದರು. ತಿದ್ದುಪಡಿಗೊಳಿಸಿದ 32 ಒಎಂಆರ್ ಶೀಟ್‌ಗಳನ್ನೂ ಸಲ್ಲಿಸ
ಲಾಯಿತು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, “ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ’ (ಆರ್‌ಎಫ್‌ಎಸ್‌ಎಲ್) ವರದಿ, ತಿದ್ದುಪಡಿ ಮಾಡಲಾದ ಒಎಂಆರ್ ಹಾಳೆಗಳ ಪ್ರತಿಗಳು, ಅಕ್ರಮದ ವಿಧಾನಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಏಳು ದಿನಗಳಲ್ಲಿ ಸಲ್ಲಿಸುವಂತೆ ಸಿಐಡಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಜು. 14ಕ್ಕೆ ಮುಂದೂಡಿತು.