ಬೆಳಗಾವಿ: ಬರ್ಬರವಾಗಿ ಹತ್ಯೆಯಾದ ಸರಳ ವಾಸ್ತು ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ತೆರಳಿದ್ದ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ್ ಸ್ವಾಮೀಜಿ ಕಾರು ಅಪಘಾತವಾಗಿದೆ. ಅದೃಷ್ಟವಶಾತ್ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿವಲಿಂಗೇಶ್ವರ್ ಸ್ವಾಮೀಜಿ ಅವರು,ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯ ಪ್ರಸಿದ್ಧ ದುರದುಂಡೇಶ್ವರ ಮಠದ ಸ್ವಾಮೀಜಿಯಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿಯೇ ಪ್ರಖ್ಯಾತಿ ಹೊಂದಿರುವ ಸಂಸ್ಥಾನ ಮಠವಿದು.
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಮುಗಿಸಿ ಹುಬ್ಬಳ್ಳಿಗೆ ವಾಪಸ್ ಬರುವ ವೇಳೆ ತೇಗುರ ಕ್ರಾಸ್ ಬಳಿ ಸ್ವಾಮೀಜಿ ಕಾರು ಪಲ್ಟಿಯಾಗಿದೆ. ಸ್ವಾಮೀಜಿ ಅವರು ಬೆಳಗಾವಿಯ ಕೆ.ಎಲ್.ಈ ಆಸ್ಪತ್ರೆಗೆ ಬಂದಿದ್ದು, ಆರೋಗ್ಯ ತಪಾಸಣೆ ಬಳಿಕ ಮಠಕ್ಕೆ ತೆರಳಲಿರುವುದಾಗಿ ತಿಳಿದುಬಂದಿದೆ
Laxmi News 24×7