ಬೆಂಗಳೂರು : ಎಸಿಬಿ ಸರ್ಚ್ ವಾರೆಂಟ್ ಪಡೆದು ಮುಂಜಾನೆ 5.50ರ ಸುಮಾರಿಗೆ ಜಮೀರ್ ಮೇಲೆ ದಾಳಿ ನಡೆಸುತ್ತಿದ್ದಾರೆ. ಎಸಿಬಿ ಅಧಿಕಾರಿಗಳು ಸದ್ಯ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ACB ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್ ಅಹ್ಮದ್ ಮೇಲೆ ದಾಳಿ ನಡೆಸುತ್ತಿದ್ದಾರೆ.
ಇದಲ್ಲದೆ ಜೊತೆಯಲ್ಲಿದ್ದ ಹಾಲಿ ಸಚಿವರಿಗೆ ನಡುಕ ಶುರುವಾಗಿದೆ.ಇಡಿ 20 ವರ್ಷಗಳ ಜಮೀರ್ ಆಸ್ತಿ ರಿಪೋರ್ಟ್ ರೆಡಿ ಮಾಡಿದ್ದು, ರಿಪೋರ್ಟ್ ಆಧಾರದ ಮೇಲೆ ಎಸಿಬಿ ರೇಡ್ ಮಾಡಲಾಗಿದೆ.
ಇಡಿ ರಿಪೋರ್ಟ್ ಆಧಾರದ ಮೇಲೆ ಜಮೀರ್ ಮೇಲೆ ರೇಡ್ ಮಾಡಲಾಗಿದ್ದು, ಜಮೀರ್ ಅಹ್ಮದ್ ಖಾನ್ ಆಸ್ತಿ ದಾಖಲೆ ಕಲೆ ಹಾಕಿದ್ದ ಇಡಿ, 2005ರಲ್ಲಿ ಚಾಮರಾಜಪೇಟೆ ಶಾಸಕರಾಗಿ ಜಮೀರ್ ಆಯ್ಕೆಯಾಗಿದ್ದರು. 20 ವರ್ಷಗಳ ಜಮೀರ್ ಆಸ್ತಿ ರಿಪೋರ್ಟ್ ರೆಡಿ ಮಾಡಿದ್ದ ಇಡಿ, ಜಮೀರ್ ಶಾಸಕರಾಗೋ ಮುನ್ನ ಇದ್ದ ಆಸ್ತಿ ಮೌಲ್ಯ, MLA, ಮಂತ್ರಿ ಆದ ನಂತರದ ಆಸ್ತಿ ಗಳಿಕೆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ. ಈ ಮಾಹಿತಿ ಆಧಾರದ ಮೇಲೆ ಮೇಲೆ ಎಸಿಬಿ ರೇಡ್ ಮಾಡಲಾಗಿದೆ. ಇಡಿ ಇಲಾಖೆಯಿಂದ ತನಿಖೆಯ ರಿಪೋರ್ಟ್ ಪಡೆದಿದ್ದ ಎಸಿಬಿ, ಇಡಿ ನೀಡಿದ ದಾಖಲೆ ಆಧಾರದ ಮೇಲೆ ಜಮೀರ್ ಮನೆ ಮೇಲೆ ದಾಳಿ ನಡೆಸಲಾಗಿದೆ.