Breaking News

ಸರ್ಕಾರಿ ಶಾಲೆಯ ಶಿಕ್ಷಕನ ಕಾಮ ಪುರಾಣ: ಮಹಿಳೆಯರ ಜತೆ ಬೆತ್ತಲೆಯ ರಾಸಲೀಲೆ – ವಿಡಿಯೋ ವೈರಲ್

Spread the love

ರಾಯಚೂರು : ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿಂಗಾಪುರ ಗ್ರಾಮದ ಸರ್ಕಾರಿ ಶಿಕ್ಷಕ ಅಜರುದ್ದಿನ್ ಕಾಮ ಪುರಾಣ ಬಯಲಾಗಿದ್ದು, ಈತನ ವಿಡಿಯೋಗಳು ವೈರಲ್ ಆಗಿವೆ. ಇದರ ಬೆನ್ನಲ್ಲೇ ಇದೀಗ ಕಾಮುಕ ಶಿಕ್ಷಕನ ಮತ್ತೊಂದು ಅಸಲಿ ಮುಖವನ್ನು ಗ್ರಾಮಸ್ಥರು ಬಿಚ್ಚಿಟ್ಟಿದ್ದಾರೆ.

ಕೆಲ‌ ದಿನಗಳ ಕಾಲ ಸಿಂಗಾಪುರ ಗ್ರಾಮದಲ್ಲಿ ವಾಸವಿದ್ದ ಕಾಮುಕ ಅಜರುದ್ದಿನ್ ಪತ್ನಿಗೆ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದನು. ಪತಿಯ ಕಿರುಕುಳ ತಾಳಲಾರದೆ ಪತ್ನಿ ಮನೆ ಬಿಟ್ಟು ಹೋಗಿದ್ದಳು ಎಂದು ಹೇಳಿದ್ದಾರೆ.

ಪತ್ನಿ ಮನೆಬಿಟ್ಟು ಹೋಗಿದ್ದರಿಂದ ಪೊರೆಬಿಟ್ಟ ಹಾವಿನಂತಾಗಿದ್ದ ಕಾಮುಕ ಶಿಕ್ಷಕನಿಗೆ ಯಾರೂ ಹೇಳೋರು ಕೇಳೋದು ಇಲ್ಲದಂತಾಗಿದ್ದು, ಪರ ಸ್ತ್ರೀಯರೊಂದಿಗೆ ಚಕ್ಕಂದವಾಡುತ್ತ ಮಜಾ ಮಾಡಿದ್ದಾನೆ. ಪಾಠ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿಗಳನ್ನ ಮನೆಗೆ ಕರೆಯಿಸಿಕೊಂಡು ಅವರ ಗುಪ್ತಾಂಗಕ್ಕೆ ಕಟ್ಟಿಗೆಯಿಂದ ತಿವಿಯುತ್ತಾ ವಿಕೃತಿ ಮೆರೆದಿದ್ದಾನೆ. ಅಲ್ಲದೇ ಪರ ಸ್ತ್ರೀಯರನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮಹಿಳೆಯರೊಂದಿಗೆ ಪಲ್ಲಂಗದಾಟವನ್ನ ಸ್ವತಃ ವಿಡಿಯೋ ಮಾಡಿಕೊಂಡಿದ್ದಾನೆ. ಇದೀಗ ಆ ವಿಡಿಯೋಗಳು ಹೊರಬಿದ್ದಿದ್ದು, ಶಿಕ್ಷಕ ಅಜರುದ್ದಿನ್ ಕಾಮದಾಟ ಬಟಾಬಯಲಾಗಿದೆ.

ಸಂತ್ರಸ್ತೆದೂರು
ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ, ಸಂತ್ರಸ್ತ ಮಹಿಳೆಯೊಬ್ಬರು ಶಿಕ್ಷಕನ ವಿರುದ್ಧ ಕಾರಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಾನು ಅನುಭವಿಸಿದ ಚಿತ್ರಹಿಂಸೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ನನ್ನ‌ ಜತೆ ಲೈಂಗಿಕ ಸಂಪರ್ಕ ಮಾಡಬೇಕು. ಇಲ್ಲವಾದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಶಿಕ್ಷಕ ಬೆದರಿಕೆ ಹಾಕಿದ್ದ. ಆರಂಭದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸ್ತೀನಿ ಎಂದು ನನ್ನನ್ನು ಪರಿಚಯ ಮಾಡಿಕೊಂಡಿದ್ದ.

 

ತದನಂತರ ಪುಸಲಾಯಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಪದೇ-ಪದೇ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ವಿರೋಧಿಸಿದ್ದಕ್ಕೆ ಅಶ್ಲೀಲ ವಿಡಿಯೋ ಮೊಬೈಲ್​ನಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡುವೆ ಎಂದು ಬೆದರಿಸಿದ್ದ. ಅವನ ಕೊಟ್ಟ ಕಿರುಕುಳದಿಂದ ಸಾಕಷ್ಟು ನೊಂದಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯ ಆರೋಪಿ ಅಜುರುದ್ದೀನ್ ನನ್ನು ಅಮಾನತುಗೊಳಿಸಲಾಗಿದ್ದು, ತಲೆಮರೆಸಿಕೊಂಡಿರುವ ಕಾಮುಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Spread the love

About Laxminews 24x7

Check Also

ನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಿಎಂ

Spread the loveನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ಅಲ್ಪಾವಧಿ ಕೃಷಿ ಸಾಲದ ಮಿತಿ ಹೆಚ್ಚಿಸುವಂತೆ ಮನವಿಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ