ಮೈಸೂರು: ಕಳೆದ ಕೆಲವು ದಿನಗಳಿಂದ ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಅಲ್ಲದೆ, ಈ ವಿಚಾರವಾಗಿ ಬಹು ಚರ್ಚೆಯು ನಡೆಯುತ್ತಿದೆ.
ನರೇಶ್ ಮೂರನೇ ಪತ್ನಿ ಮಾಧ್ಯಮಗಳ ಮುಂದೆ ಬಂದು ಆರೋಪಗಳನ್ನು ಮಾಡಿದ್ದು, ಅದಕ್ಕೆ ಪ್ರತಿಯಾಗಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಸ್ಪಷ್ಟನೆಗಳನ್ನು ನೀಡಿದ್ದಾರೆ.
ಇದೆಲ್ಲದರ ನಡುವೆ ಇದೀಗ ಮೈಸೂರಿನ ಹೋಟೆಲ್ ಒಂದರ ಬಳಿ ಹೈಡ್ರಾಮವೊಂದು ನಡೆದಿದೆ.
ಹೋಟೆಲ್ ರೂಮಿನಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್, ಪೊಲೀಸ್ ಭದ್ರತೆಯಲ್ಲಿ ಹೊರಟರು. ಈ ವೇಳೆ ರಮ್ಯಾ ಅವರಿಬ್ಬರನ್ನು ತಡೆಯಲು ಪ್ರಯತ್ನಿಸಿದರು. ಅಲ್ಲದೆ, ಚಪ್ಪಲಿ ಎತ್ತಿಕೊಂಡು ಹಲ್ಲೆ ಮಾಡಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ನರೇಶ್ ಅವರ ಆಪ್ತ ರಕ್ಷಕರು ರಮ್ಯಾರನ್ನು ತಡೆದರು.
ಇದೇ ಸಂದರ್ಭದಲ್ಲಿ ರಮ್ಯಾ, ಪವಿತ್ರಾ ಲೋಕೇಶ್ ವಿರುದ್ಧ ಮನಬಂದಂತೆ ರಮ್ಯಾ ವಾಗ್ದಾಳಿ ನಡೆಸಿದರು. ಆದರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೋಟೆಲ್‌ನಿಂದ ಹೊರ ಹೋದರು.
ಇಷ್ಟು ದಿನ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಹೈಡ್ರಾಮ ಇದೀಗ ಮೈಸೂರಿಗೆ ಸ್ಥಳಾಂತರವಾಗಿದೆ. ನಿನ್ನೆ ರಾತ್ರಿ ಮೈಸೂರಿಗೆ ಆಗಮಿಸಿದ ನರೇಶ್ ಮತ್ತು ಪವಿತ್ರಾ ಲೋಕೇಶ್, ವಿವಿ ಪುರಂ ಠಾಣೆಗೆ ತೆರಳಿ ಒಂದು ದೂರನ್ನು ಸಲ್ಲಿಸಿದ್ದಾರೆ. ಆದರೆ, ಯಾರ ವಿರುದ್ಧ ದೂರು ನೀಡಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲ.
ದೂರು ದಾಖಲಾದ ಬಳಿಕ ಇಬ್ಬರು ನೇರವಾಗಿ ಹೋಟೆಲ್ ಒಂದಕ್ಕೆ ತೆರಳಿ ಒಂದೇ ರೂಮಿನಲ್ಲಿ ತಂಗುತ್ತಾರೆ. ಈ ವಿಚಾರ ಗೊತ್ತಾಗಿ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಅದೇ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿ, ನರೇಶ್ ಮತ್ತು ಪವಿತ್ರಾ ಲೋಕೇಶ್ ಇದ್ದ ರೂಮಿನ ಮುಂಭಾಗ ಧರಣಿ ಕುಳಿತು ಇಡೀ ರಾತ್ರಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಬೆಳಗ್ಗೆ 8 ಗಂಟೆ ಸಮಯದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರು ರೂಮಿನಿಂದ ಹೊರಗಡೆ ಬಂದಾಗ ಅಲ್ಲಿಯೇ ಇದ್ದ ರಮ್ಯಾ, ಇಬ್ಬರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಚಪ್ಪಲಿ ತೆಗೆದುಕೊಂಡು ಬಾರಿಸಲು ಯತ್ನಿಸುತ್ತಾರೆ. ಆ ಸಮಯದಲ್ಲಿ ಪೊಲೀಸರು ಮತ್ತು ಅಂಗ ರಕ್ಷಕರು ಇಬ್ಬರಿಗೂ ರಕ್ಷಣೆ ಒದಗಿಸುತ್ತಾರೆ. ಬಳಿಕ ನರೇಶ್ ಮತ್ತು ಪವಿತ್ರಾ ಲೋಕೇಶ್ ಒಂದೇ ಕಾರಿನಲ್ಲಿ ಹೋಟೆಲ್‌ನಿಂದ ತೆರಳುತ್ತಾರೆ.