Breaking News

ಬೆಳಗಾವಿ ತಾಲೂಕಿನ ಶಿಂಧೋಳಿಯಲ್ಲಿ ರಸ್ತೆ ಕಾಮಗಾರಿ ಅರ್ಧಗೊಂಡು ಕೊನೆಯ ಸಬ್ ವೇ ಕೂಡಾ ರಸ್ತೆ ಇಲ್ಲ

Spread the love

ಬೆಳಗಾವಿ ತಾಲೂಕಿನ ಶಿಂಧೋಳಿಯಲ್ಲಿ ಶ್ರೀರಾಮನಗರ 19ನೇ ಕ್ರಾಸ್ ಬಳಿಯ ಅಡ್ಡರಸ್ತೆ ಹಾಳಾಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹಾಗಾಗಿ ಅಲ್ಲಿ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕೆಂದು ಶ್ರೀರಾಮನಗರ ನಿವಾಸಿಗಳು ಪಿಡಿಒ ರವರಿಗೆ ಮನವಿ ಮಾಡಿದ್ದಾರೆ.

ಶ್ರೀರಾಮನಗರ 19ನೇ ಅಡ್ಡ ರಸ್ತೆಯ ನಿವಾಸಿಗಳು ಶಿಂಧೋಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ರಸ್ತೆ ನಿರ್ಮಾಣ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ. 19ನೇ ಅಡ್ಡ ರಸ್ತೆಯ ಮುಖ್ಯರಸ್ತೆ ಕಾಮಗಾರಿ ಅರ್ಧಗೊಂಡು ಕೊನೆಯ ಸಬ್ ವೇ ಕೂಡಾ ರಸ್ತೆ ಇಲ್ಲದೆ ತೊಂದರೆಯಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯೂ ಕೂಡಾ ಸಮರ್ಪಕವಾಗಿ ಆಗುತ್ತಿಲ್ಲ,

ಇದಲ್ಲದೇ ರಸ್ತೆಗೆ ಹೊಂದಿರುವ ಇಂಡಾಲ ನಗರದ ಮಕ್ಕಳ ಉದ್ಯಾನ ದುರಾವಸ್ಥೆಗೊಂಡಿದೆ. ಸರ್ಕಾರಿ ಶಾಲೆಯ ಕೊಠಡಿಗಳು ಬಿದ್ದು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವುದು ಕೂಡಾ ತೊಂದರಯಾಗುತ್ತಿದೆ. ಹಾಗಾಗಿ ಮೂಲಭೂತ ಸೌಲಭ್ಯಗಳನ್ನು ಆದ್ಯತೆಯ ಮೇಲೆ ಕಲ್ಪಿಸಿಕೊಡಬೇಕೆಂದು ನಗರದಲ್ಲಿನ ಅವ್ಯವಸ್ಥೆಯನ್ನು ತಿಳಿಸುವ ಛಾಯಾಚಿತ್ರ ಸಮೇತವಾಗಿ ಪಿಡಿಒ ರವರಲ್ಲಿ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ