ಮನೆಯವರ ವಿರೋಧ ಕಟ್ಟಿಕೊಂಡು ಪ್ರೇಮವಿವಾಹವಾದ ಬಳಿಕ ೩ ಮಕ್ಕಳ ಗರ್ಭವತಿ ಅನುಭವಿಸಿದ್ದು ಅಷ್ಟೀಷ್ಟಲ್ಲ. ಕೊನೆಗೂ ಆಕೆಯ ಗಂಡನನ್ನು ಹುಡುಕಿ ಆ ಪ್ರೇಮಿಗಳನ್ನು ಒಂದು ಮಾಡಲಾಗಿದೆ. ಅಷ್ಟಕ್ಕೂ ಆ ದಂಪತಿಗಳಾರು … ಅವರನ್ನು ಒಂದುಗೂಡಿಸಿದ್ದಾದರೂ ಯಾರು??? ಅಂತೀರಾ. ಹಾಗಾದ್ರೇ ನೋಡಿ ಈ ಇಂಟರೆಸ್ಟಿಂಗ್ ಸ್ಟೋರಿ.
ಗಿಡಗಂಟಿಗಳಲ್ಲಿ ವಾಸಿಸುತ್ತಿರುವ ಮಹಿಳೆ… ಹಸಿವು-ನೀರಡಿಕೆಯಿಂದ ಪರಿತಪಿಸುತ್ತಿರುವ ಗರ್ಭಿಣಿಯ ಮೂರು ಮಕ್ಕಳು… ಗಿಡಗಂಟಿಯಲ್ಲಿ ಪತಿಯಿಲ್ಲದೇ ಪರಿತಪಿಸುತ್ತಿದ್ದ ಅಬಲೆಗೆ ಸಹಾಯ ಮಾಡಿದ ಫೌಂಡೇಶನ್…
ಹೌದು, ೮ ವರ್ಷದ ಹಿಂದೆ ಪುರ್ನಾನಂದ ಸಣ್ಣಪ್ಪನವರ್ ಖಾನಾಪುರ ತಾಲೂಕಿನ ದೇಮನಕಟ್ಟಿಯ ಮಹಾದೇವಿ ಎಂಬ ಯುವತಿಯೊಂದಗೆ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದ. ನಂತರ ಕಾಕತಿ ಗ್ರಾಮಕ್ಕೆ ಬಂದು ಈ ದಂಪತಿಗಳು ಬದುಕಿನ ಬಂಡಿ ಸಾಗಿಸುತ್ತಿದ್ದರು. ನಂತರ ಪುರ್ನಾನಂದನಿಗೆ ಕುಡಿತ ಚಟ ಹೆಚ್ಚಾಗಿ ಗರ್ಭಿಣಿ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಹೊರಟು ಹೋದ. ಮೊದಲೇ ಗರ್ಭಿಣಿ ಅಲ್ಲದೇ ಗಂಡನಿಲ್ಲದೇ ಮಕ್ಕಳ ಹೊಟ್ಟೆ ತುಂಬಿಸಲು ಆಗದೇ ತೊಂದರೆಯಲ್ಲಿದ್ದವಳನ್ನು ಕಂಡು ಆರೋಗ್ಯ ಇಲಾಖೆಯ ಶುಶ್ರೂಕೀಯರು ಲಕ್ಷ್ಮೀ ಅಂಬಿ ಅವರು ಇದರ ಮಾಹಿತಿಯನ್ನು ಡಿವೈನ್ ಹೆಲ್ಪಿಂಗ್ ಹ್ಯಾಂಡ್ಸ್ ಗ್ರುಪ್‌ನ ಗಜಾನನ ಗವ್ಹಾಣೆಯವರಿಗೆ ನೀಡಿದ್ದಾರೆ.
ಕೂಡಲೇ ದಾನಿಗಳ ಸಹಾಯದಿಂದ ಆಕೆಗೆ ಆಸರೆಯನ್ನು ಕಲ್ಪಿಸಿ ಪ್ರತಿದಿನ ದೈನಂದಿನ ವಸ್ತುಗಳನ್ನು ಗಜಾನನ ಗವ್ಹಾಣೆಯವರು ಪೂರೈಸಿದರು. ಇವರ ಈ ಉಪಕ್ರಮಕ್ಕೆ ಸಮಾಜ ಸೇವಕ ಪವನ ಮಾಳದಕರ ಆರ್ಥಿಕ ಸಹಾಯ ಮಾಡಿದರೇ, ಗ್ರಾಮ ಪಂಚಾಯತ ಸದಸ್ಯ ಮನೋಹರ ಶೇಖರಗೋಳ, ಸುನೀತಾ ಗವ್ಹಾಣೆ, ಶಿವಾ ಲೋಹಾರ್, ವಿನಾಯಕ ಕೇಸರಕರ, ರಾಜಶ್ರೀ ಕೋಲೆ ಅವರು ಸಹಾಯ ನೀಡಿ ಮಾನವಿಯತೇ ಮೆರೆದಿದ್ದಾರೆ. ಅಲ್ಲದೇ ಆಕೆಯ ಪತಿಯನ್ನು ಹುಡುಕಲು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಕೂಡ ದಾಖಲಿಸಲಾಯಿತು. ವಿವಿಧ ಪ್ರಸಾರ ಮಾಧ್ಯಮಗಳಲ್ಲಿ ಸುದ್ಧಿ ಕೂಡ ಬಿತ್ತರಿಸಲಾಯಿತು. ನಂತರ ಪತಿ ಮಹಾಶಯ ಪ್ರಮುಖರೊಬ್ಬರೊಂದಿಗೆ ತನ್ನ ತಪ್ಪಿನ ಅರಿವಾಗಿ, ಪತ್ನಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ತನ್ನ ಪತಿಯೊಂದಿಗೆ ಸೇರಿಸಿದ್ದಕ್ಕೆ ಪತ್ನಿ ಮಹಾದೇವಿ ಅವರು ಸಹಾಯ ಮಾಡಿದವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
Laxmi News 24×7