ಬಳ್ಳಾರಿ: ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಆಯೋಜಿಸಲಾಗಿದ್ದ ಸಭೆಯಲ್ಲಿ ತಡವಾಗಿ ಬಂದು ಕನ್ನಡ ಬಳಸದ ಪಾಲಿಕೆ ಆಯಕ್ತೆಯನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಸಭೆಗೆ ಮೇಯರ್ ಮೊದಲು ಬಂದು ಆಯುಕ್ತರಿಗಾಗಿ ಕಾದರೂ ಅವರ ಪತ್ತೆಯೇ ಇರಲಿಲ್ಲ, ಇದರಿಂದ ಅಸಮಾಧಾನಗೊಂಡ ಸದಸ್ಯರು ತಡವಾಗಿ ಬಂದ ಪ್ರೀತಿ ಗೆಹ್ಲೋಟ್ ಅವರ ವಿರುದ್ಧ ಅಸಮಾಧಾನ ಹೊರಹಾಕಿದರು.
ಇದೇ ವೇಳೆ ಕಾದು ಸುಸ್ತಾದ ಮೇಯರ್ ರಾಜೇಶ್ವರಿ ಅವರು ಕೆಲಕಾಲ ಹೊರಹೋಗಿದ್ದರು, ಈ ವೇಳೆಯೇ ಬಂದ ಆಯುಕ್ತೆ ಸಭೆಯನ್ನು ಪ್ರಾರಂಭಿಸಿದ್ದರು. ಇದರಿಂದ ಆಕ್ರೋಶಗೊಂಡ ಸದಸ್ಯರಿಂದ ಗದ್ದಲ ಏರ್ಪಟ್ಟು ಹೈ ಡ್ರಾಮಾವೇ ನಡೆಯಿತು.
ಆಯುಕ್ತರ ನಡೆಯನ್ನು ಖಂಡಿಸಿ ಕೆಲಕಾಲ ಸಭೆಯಲ್ಲೇ ಪ್ರತಿಭಟನೆ ನಡೆಸಿದರು. ನೀವು ಸರ್ವಾಧಿಕಾರಿಯಂತೆ ವರ್ತನೆ ಮಾಡ್ತೀರಾ, ಯಾವಾಗ್ಲೂ ಮೀಟಿಂಗ್ ಮೀಟಿಂಗ್ ಅಂತಿರಾ, ಜನರ ಕಷ್ಟ ಕೇಳಲ್ಲ ಎಂದು ಮೇಯರ್, ಉಪಮೇಯರ್ ಸೇರಿದಂತೆ ಪಾಲಿಕೆ ಸದಸ್ಯ ಕಮಿಷನರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.