Breaking News

ಆ ಕಾನೂನು ಜಾರಿಗೆ ಬಂದರೆ ಆಟೋಮೇಟಿಕ್ ಆಗಿ ಎರಡು ರಾಜ್ಯಗಳಾಗುತ್ತೇವೆ: ಸತೀಶ‌ ಜಾರಕಿಹೊಳಿ‌

Spread the love

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರತಿಕ್ರಿಯೆ: ಇದೇ ವೇಳೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಗ್ಗೆ ಸಚಿವ ಉಮೇಶ್ ಕತ್ತಿ ಪುನರುಚ್ಚಾರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೂರು ಕೋಟಿ ಜನಸಂಖ್ಯೆ ಇದ್ದಲ್ಲಿ ಎರಡು ರಾಜ್ಯ ಮಾಡಲು ಮಸೂದೆ ತರಲು ಬಿಜೆಪಿ ಪ್ಲ್ಯಾನ್ ಇದೆ. ಅದರ ಚಿಂತನೆ‌ ಕೂಡ ನಡೀತಿದೆ. ಒಂದು ವೇಳೆ ಆ ಕಾನೂನು ಜಾರಿಗೆ ಬಂದರೆ ಆಟೋಮೇಟಿಕ್ ಆಗಿ ಎರಡು ರಾಜ್ಯಗಳಾಗುತ್ತೇವೆ. ಹಿಂದೆ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದರು.

ಚಿಕ್ಕ ರಾಜ್ಯಗಳಾದರೆ ಅಭಿವೃದ್ಧಿ ಆಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಚಿಕ್ಕ ರಾಜ್ಯಗಳಾದರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಇಲ್ಲಿ ಪ್ರತ್ಯೇಕ ಅನ್ನೋ ಪ್ರಶ್ನೆಯೇ ಬರೊದಿಲ್ಲ. ಬಿಜೆಪಿಯವರು ಕಾನೂನು ತರುತ್ತಿದ್ದಾರೆ. ಪ್ರತ್ಯೇಕ ರಾಜ್ಯ ಎನ್ನುವ ಪ್ರಶ್ನೆ ಬೇರೆ ಹೋರಾಟ ಮಾಡಿ ಪಡೆಯೋದು ಬೇರೆಬೇರೆ.

ತೆಲಂಗಾಣ ಹೇಗೆ ಹೋರಾಟ ಮಾಡಿ ಪಡೆದ್ರು, ಹಾಗೇ ಇದು ಹೋರಾಟ ಅಲ್ಲ. ಕಾನೂನನ್ನೇ ತರುತ್ತಿದ್ದಾರೆ. ಪ್ರತ್ಯೇಕ ರಾಜ್ಯ ಮಾಡಬೇಕೆಂಬುದು ಬಿಜೆಪಿ ಅಜೆಂಡಾದಲ್ಲಿದೆ. ಆ ಕಾನೂನು ಬಂದಾಗ ಚರ್ಚೆ ಮಾಡೋಣ ಎನ್ನುವ ಮೂಲಕ ಉಮೇಶ ಕತ್ತಿ ಹೇಳಿಕೆಗೆ ಜಾರಕಿಹೊಳಿ ಜಾಣ್ಮೆಯ ಉತ್ತರ ನೀಡಿ ಜಾರಿಕೊಂಡಿದ್ದಾರೆ.


Spread the love

About Laxminews 24x7

Check Also

ಅಲಿ ಖಮೇನಿ ಪೋಸ್ಟರ್ ವಿರುದ್ಧ ಶ್ರೀರಾಮ ಸೇನೆಯಿಂದ ಶಿವಾಜಿ ಹಾಗೂ ಮೋದಿ ಬ್ಯಾನರ್ ಅಭಿಯಾನ

Spread the loveಬೆಳಗಾವಿ : ನಗರದಲ್ಲಿ ಅಳವಡಿಸಿರುವ ಇರಾನ್ ದೇಶದ ಅಲಿ ಖಮೇನಿ ಪೋಸ್ಟರ್ ವಿರುದ್ಧ ಶ್ರೀರಾಮ ಸೇನೆಯಿಂದ ಆಫ್ಜಲ್‌ಖಾನ್‌ನ ವಧೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ