Breaking News

ಪ್ರತ್ಯೇಕ ರಾಜ್ಯ ವಿಚಾರವಾಗಿ ನೀವು ಕತ್ತಿಯವರನ್ನೇ ಕೇಳಬೇಕು.: ಬಸವರಾಜ್ ಬೊಮ್ಮಾಯಿ

Spread the love

ಉಮೇಶ್ ಕತ್ತಿ ಹೇಳಿಕೆ ಕುರಿತಂತೆ ದೆಹಲಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತ್ಯೇಕ ರಾಜ್ಯ ವಿಚಾರವಾಗಿ ನೀವು ಕತ್ತಿಯವರನ್ನೇ ಕೇಳಬೇಕು. ಅವರು ಹೀಗೆ ಹೇಳುತ್ತಿರುವುದು ಹೊಸದೇನೂ ಅಲ್ಲ ಎಂದಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ನಾಳೆ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದರು. ಸಚಿವ ಉಮೇಶ್ ಕತ್ತಿರವರ ಹೇಳಿಕೆಯನ್ನು ಅವರನ್ನೇ ಕೇಳಬೇಕು. ಇದನ್ನು ಅವರು ಸುಮಾರು ೧೦ ಹಲವಾರು ಬಾರಿ ಹೇಳಿಕೆ ನೀಡಿದ್ದಾರೆ. ಇನ್ನು ಸರಕಾರದ ಮಟ್ಟದಲ್ಲಿ ಈ ಕುರಿತಂತೆ ಯಾವುದೇ ಚಿಂತನೆ ಇಲ್ಲ ಎಂದಿದ್ದಾರೆ.

ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಉಮೇಶ್ ಕತ್ತಿ, ಉತ್ತರ ಕರ್ನಾಟಕದ ಶಾಸಕರು ಯಾವಾಗ ನಮ್ಮ ಭಾಗಕ್ಕೆ ಅನ್ಯಾಯ ವಾಗುತ್ತದೆಯೋ ಆವಾಗ ಅದನ್ನು ನಾವು ವಿರೋಧಿಸುತ್ತೇವೆ. ಇನ್ನು ರಾಜ್ಯದ ಅಭಿವೃದ್ಧಿ ದ್ಯೋತಕವಾಗಿ ವಿಭಜನೆ ಮಾಡುವುದು ಉತ್ತಮ ಎಂಬುದು ನಮ್ಮ ಅಭಿಪ್ರಾಯ. ಈ ಕುರಿತಂತೆ ಜನಸಂಖ್ಯೆ ಹೆಚ್ಚಾಗಿದೆ. ರಾಜ್ಯ ವಿಂಗಡಣೆಗೆ ಪ್ರಧಾನಿ ಮೋದಿರವರೇ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದೇನೆ. ಇನ್ನು ಅಭಿವೃದ್ಧಿ ವಿಷಯವಾಗಿ ರಾಜ್ಯ ವಿಂಗಡಣೆಯಾದರೆ ಒಳ್ಳೆಯದಾಗುತ್ತೆ ಎಂದರು.


Spread the love

About Laxminews 24x7

Check Also

ಇನ್ನೂ ಎರಡು ದಿನ ಮಹಾಮಳೆ

Spread the loveಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ (ಜು.7) ಜೋರು ಗಾಳಿ ಸಹಿತ ಮಳೆಯಾಗುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ