ಅಮರಾವತಿ: ಸರ್ಕಾರಿ ಶಿಕ್ಷಕನಾಗಬೇಕೆಂದು ಕನಸು ಕಂಡಿದ್ದ ಆಂಧ್ರಪ್ರದೇಶದ ವ್ಯಕ್ತಿ ತನ್ನ 33ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು, 24 ವರ್ಷ ಕಾದ ಬಳಿಕ ತನ್ನ 57ನೇ ವಯಸ್ಸಿನಲ್ಲಿ ಉದ್ಯೋಗ ಪಡೆದಿದ್ದಾರೆ.
ಪಥಪಟ್ಟಣದ ಪೆದ್ದಾ ಸಿದ್ದಿಯ ಅಲಕಾ ಕೇದಾರೇಶ್ವರ್ ರಾವ್ ತಮ್ಮ ಬ್ಯಾಚುಲರ್ ಆಫ್ ಎಜುಕೇಶನ್ ಅನ್ನು ಪೂರೈಸಿ, 1998ರಲ್ಲಿ ಸರ್ಕಾರಿ ಶಿಕ್ಷಕನಾಗುವ ಸಲುವಾಗಿ ಜಿಲ್ಲಾ ಆಯ್ಕೆ ಸಮಿತಿ(ಡಿಎಸ್‌ಸಿ) ಪರೀಕ್ಷೆ ಬರೆದಿದ್ದರು. ಅವರು ಒಳ್ಳೆಯ ಅಂಕ ಗಳಿಸಿದ್ದರೂ ಕಾನೂನು ಸಮಸ್ಯೆಯಿಂದ ಅವರ ಆಯ್ಕೆ ವಿಳಂಬವಾಯಿತು. ಇತ್ತೀಚೆಗೆ ಜಿಲ್ಲಾ ಆಯ್ಕೆ ಸಮಿತಿ 1998ರ ಕಡತವನ್ನು ತೆರವುಗೊಳಿಸಿದ್ದರಿಂದ ಕೊನೆಗೂ ತಮ್ಮ 57ನೇ ವಯಸ್ಸಿನಲ್ಲಿ ಕೇದಾರೇಶ್ವರ್‌ಗೆ ಶಿಕ್ಷಕ ಉದ್ಯೋಗ ದೊರೆತಿದೆ.
1998ರಲ್ಲೇ ಪರೀಕ್ಷೆ ಬರೆದು ನೌಕರಿಗಾಗಿ ಕಾದು ಕುಳಿತಿದ್ದ ಕೇದಾರೇಶ್ವರ್ ಕೈಯಲ್ಲಿ ಕಾಸಿಲ್ಲದೇ ತನ್ನ ತಾಯಿಯೊಂದಿಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬಡತನದೊಂದಿಗೆ ತಾಯಿಯ ಮರಣದ ಬಳಿಕ ಖಿನ್ನತೆಗೆ ಜಾರಿದ ಕೇದಾರೇಶ್ವರ್ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ಆತನನ್ನು ಸ್ಥಳೀಯರು ಮಾನಸಿಕ ಅಸ್ವಸ್ಥ ಎಂದು ದೂರವಿಡಲು ಪ್ರಾರಂಭಿಸಿದರು