ಚಿಕ್ಕೋಡಿ: ಕಾಂಗ್ರೆಸ್ ಸರ್ಕಾರವೇ 90ರ ದಶಕದಲ್ಲಿ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರಲು ಚಿಂತಿಸಿತ್ತು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ ಆಯೋಜಿಸಿದ್ದ ಹಸಿರು ಹಬ್ಬ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ಇದು ಸ್ವತಃ ಕಾಂಗ್ರೆಸ್‌ನವರೇ ಜಾರಿಗೆ ತರಲು ಯತ್ನಿಸಿದ ಕಾರ್ಯಕ್ರಮ. ಆದರೆ ಇಂದು ಮೋದಿ ನೇತೃತ್ವದ ಸರ್ಕಾರ ಅಗ್ನಿಪಥ್ ಯೋಜನೆಗೆ ಚಾಲನೆ ನೀಡಿದೆ. ಆದರೆ ಕಾಂಗ್ರೆಸ್‌ನವರು ಈಗ ಈ ಯೋಜನೆಗೆ ಯಾಕೆ ವಿರೋಧ ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದರು.
ಯುವಕರು ಬಿಜೆಪಿ ಪರವಾಗಿ ಹೋಗುತ್ತಿದ್ದಾರೆ ಎಂದು ಅವರಿಗೆ ಅನ್ನಿಸುತ್ತಿದೆ. ಇಂದಿನ ಸಮಾಜ ಮತ್ತು ಯುವಕರು ಬಿಜೆಪಿ ಪರವಾಗಿಯೇ ಇದ್ದಾರೆ. 75 ಸಾವಿರ ಯುವಕರಿಗೆ ನೌಕರಿ ಕೊಡುವ ಉದ್ದೇಶವನ್ನು ಅಗ್ನಿಪಥ್ ಹೊಂದಿದೆ. ಅಗ್ನಿವೀರರು 4 ವರ್ಷಗಳ ಕಾಲ ಸೇವೆ ಮಾಡುವುದು ಯೋಜನೆಯಲ್ಲಿದೆ. ಅವರು ದುಡಿದ 11 ಲಕ್ಷ, ನಾವು ಕೊಡುವ 11 ಲಕ್ಷ ರೂ. ಸೇರಿಸಿ ಅವರಿಗೆ ನೀಡುವ ಯೋಜನೆ ಇದಾಗಿದೆ. ಇಷ್ಟೆಲ್ಲಾ ಅನುಕೂಲವಿದ್ದರೂ ಕಾಂಗ್ರೆಸ್ ಯಾಕಿಷ್ಟು ವಿರೋಧ ಮಾಡುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.