Breaking News

ನಾನು ಹಾಗೂ ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡುತ್ತಿದ್ದೆವು ಎಂದು ಸಿಸಿಬಿ ಮುಂದೆ ಆರೋಪಿ ರವಿಶಂಕರ್ ಸ್ಫೋಟಕ ಮಾಹಿತಿ

Spread the love

ಬೆಂಗಳೂರು: ನಾನು ಹಾಗೂ ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡುತ್ತಿದ್ದೆವು ಎಂದು ಸಿಸಿಬಿ ಮುಂದೆ ಆರೋಪಿ ರವಿಶಂಕರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿ ರವಿಶಂಕರ್ ಬಾಯಿಬಿಡಿಸಿದ್ದಾರೆ. ಈ ವೇಳೆ ಆತ ನಾನು ರಾಗಿಣಿ ಒಟ್ಟಿಗೆ ಡ್ರಗ್ ಸೇವನೆ ಮಾಡಿದ್ವಿ. ಒಂದು ಮಾತ್ರೆಯ ‘ಕಾಲು ಭಾಗ’ ಇಬ್ಬರು ತಗೊಂಡಿದ್ವಿ. ವೈಭವ್ ಜೈನ್ ಮೂಲಕ ಡ್ರಗ್ಸ್ ತರಿಸಿಕೊಂಡಿದ್ವಿ ಎಂಬುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸೆಂಟ್ ಮಾರ್ಕ್ಸ್ ರಸ್ತೆಯ ಏರ್ ಲೈನ್ಸ್ ಹೋಟೆಲ್‍ನಲ್ಲಿ ನಾನು ರಾಗಿಣಿ ಭೇಟಿಯಾಗಿದ್ವಿ. ಸೆಂಟ್ ಮಾರ್ಕ್ಸ್ ರಸ್ತೆಯ ಕಬಾಬ್ ಕಾರ್ನರ್ ಬಳಿ ಡ್ರಗ್ಸ್ ನೀಡಿದ್ದ. ಆನಂತರ ನಾವು ಅದನ್ನ ಪಡೆದುಕೊಂಡು ಊಟ ಮಾಡಿ ಹೋಗಿದ್ದೆವು. ಬಳಿಕ ನಾವು ಹೊಟೇಲ್‍ಗೆ ವಾಪಸ್ ಹೋದೆವು ಎಂಬ ಮಾಹಿತಿಯನ್ನು ರವಿಶಂಕರ್ ನೀಡಿದ್ದಾನೆ.

ಕೊರೊನಾ ಲಾಕ್‍ಡೌನ್ ಟೈಂ ಸಮಯದಲ್ಲೂ ನಮ್ಮ ಬಿಸಿನೆಸಲ್ ನಿಲ್ಲಿಸಿರಲಿಲ್ಲ. ನಗರದಲ್ಲಿ ಎಲ್ಲಾ ಕ್ಲೋಸ್ ಆದ ಮೇಲೆ ಬೆಂಗಳೂರಿನ ಹೊರವಲಯಕ್ಕೆ ಶಿಫ್ಟ್ ಆಗಿತ್ತು. ಆ ನಂತರ ಪಾರ್ಟಿಗಳನ್ನ ನಗರದ ಹೊರವಲಯಕ್ಕೆ ಶಿಫ್ಟ್ ಮಾಡಲಾಯ್ತು. ಅಲ್ಲಿ ವಿನಯ್, ಅರುಣ್, ಚರಣ್ ಸಾಥ್ ನೀಡಿದ್ರು. ವೈಭವ್ ಅಲ್ಲಿಗೆ ಡ್ರಗ್ ಸಪ್ಲೈ ಮಾಡ್ತಾ ಇದ್ದ. ಅಲ್ಲದೆ ಸೋಷಿಯಲ್ ಮೀಡಿಯಾ ಮೂಲಕ ಶ್ರೀಮಂತರ ಮಕ್ಕಳಿಗೆ ಮೆಸೇಜ್ ಮಾಡಿ ಕೆಲ ಕೋಡ್ ವರ್ಡ್ ಗಳ ಮೂಲಕ ಕರೆಸಲಾಗ್ತಿತ್ತು. ಈ ವೇಳೆ ಜಿಮ್ಮರ್ ಪ್ರಶಾಂತ್ ರಾಂಕಾ ಆಯೋಜನೆಗೆ ಸಾಥ್ ನೀಡಿದ್ದ. ಇನ್ನೂ ಪಾರ್ಟಿ ಆಯೋಜನೆಗೆ ಪ್ರಶಾಂತ್ ರಾಜ್ ಫಾರಂ ಹೌಸ್ ವ್ಯವಸ್ಥೆ ಮಾಡ್ತಿದ್ದ. ಈ ಪಾರ್ಟಿಗಳಿಗೆ ಎಕ್ಟಸಿ ಪಿಲ್ಸ್ ಡ್ರಗ್ ಬಳಕೆ ಮಾಡಲಾಗ್ತಿತ್ತು ಎಂದು ರವಿಶಂಕರ್ ವಿವರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ತಿರುವಿನಲ್ಲಿ KSRTC ಬಸ್​ ಬ್ರೇಕ್​ ಫೇಲ್​ ಚಾಲಕನ ಸಮಯ ಪ್ರಜ್ಞೆ ಹಾಗೂ ಐಡಿಯಾಕ್ಕೆ ಪ್ರಯಾಣಿಕರು ಕೃತಜ್ಞತೆ

Spread the loveಚಾಮರಾಜನಗರ, (ಏಪ್ರಿಲ್ 27): ಮಹದೇಶ್ವರಬೆಟ್ಟದ ತಾಳಬೆಟ್ಟ ತಿರುವಿನಲ್ಲಿ KSRTC ಬಸ್​ ಬ್ರೇಕ್​ ಫೇಲ್​ ಆಗಿದೆ. ಕೂಡಲೇ ಎಚ್ಚೆತ್ತ ಡ್ರೈವರ್​​​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ