ಆನೇಕಲ್ (ಬೆಂಗಳೂರು): ಒಂಟಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದಲ್ಲಿ ಗುರುವಾರ ರಾತ್ರಿ ನಡೆದಿದೆ.
ಶ್ವೇತಾ(35) ಮೃತ ಮಹಿಳೆ. ಕಳ್ಳತನಕ್ಕೆ ಬಂದಿದ್ದ ಕಳ್ಳರಿಂದ ಭೀಕರ ಕೃತ್ಯ ನಡೆದಿದೆ ಎನ್ನಲಾಗಿದೆ. ಶ್ವೇತಾ ಮನೆಯಲ್ಲಿ ಒಬ್ಬಳೆ ಇದ್ದಿದ್ದನ್ನು ಗಮನಿಸಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಶ್ವೇತಾಳ ಆನೇಕಲ್ ತಾಲ್ಲೂಕಿನ ಚಂದಾಪುದಲ್ಲಿ ಮೆಡಿಕಲ್ ಶಾಪ್ ಹೊಂದಿದ್ದಾರೆ. ಶ್ವೇತಾಳ ಅತ್ತೆ ಹಾಗೂ ಕುಟುಂಬಸ್ಥರು ಮಲೆಮಹದೇಶ್ವರ ದೇವಾಲಯಕ್ಕೆ ತೆರಳಿದ್ದರು. ಹೀಗಾಗಿ ರಾತ್ರಿ ವೇಳೆಯಲ್ಲಿ ಶ್ವೇತಾ ಒಂಟಿಯಾಗಿದ್ದಳು. ಇದನ್ನು ಗಮನಿಸಿ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಕೃತ್ಯ ಎಸಗಿದ್ದಾರೆಂದು ಹೇಳಲಾಗಿದೆ.
ಚಾಕುವಿನಿಂದ ಎದೆಯ ಕುತ್ತಿಗೆಗೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಿ, ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾರೆ.
ಅಲ್ಲದೆ, ಮನೆಯಲ್ಲಿದ್ದ ಕೆಲ ವಸ್ತುಗಳನ್ನು ಕದ್ದಿದ್ದಾರೆ. ಸಂಜೆ ಸಮಯದಲ್ಲಿ ಮನೆ ಮುಂದೆ ಎರಡು ಕಾರು ನಿಂತಿದ್ದನ್ನು ಗಮನಿಸಿದ್ದಾಗಿ ಸ್ಥಳೀಯರು ಹೇಳಿದ್ದಾರೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ.ಡಿ.ಚನ್ನಣ್ಣನವರ್ ಪರಿಶೀಲನೆ ನಡೆಸಿದರು. ಶ್ವಾನದಳ ಬೆರಳಚ್ಚು ತಜ್ಞರಿಂದಲೂ ಪರಿಶೀಲನೆ ನಡೆದಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಭಾಗದಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರಿಗೆ ಕೊಲೆಯ ಆರೋಪಿಗಳ ಬಗ್ಗೆ ಕೆಲವು ಮಾಹಿತಿಗಳು ಲಭ್ಯವಾಗಿವೆ.
Laxmi News 24×7