Breaking News

ಹೊಸ ಕಾರ್ಮಿಕ ನೀತಿ ಬಂದ್ರೆ ವಾರಕ್ಕೆ 4 ದಿನ ಕೆಲಸ, ಉಳಿತಾಯ ಜಾಸ್ತಿ!

Spread the love

ಬೆಂಗಳೂರು, ಜೂ. 14: ಪ್ರತಿ ದಿನ 12 ತಾಸು ಕೆಲಸ.. ನಾಲ್ಕು ದಿನಕ್ಕೆ ವಾರದ 48 ಗಂಟೆ ಕೆಲಸ ಮಾಡಿದ್ರೆ ಸಾಕು, ಉಳಿದ ಮೂರು ದಿನ ರಜೆ!

ಹೊಸ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ. ಅಂದಹಾಗೆ ಜುಲೈ 1 ನೇ ತಾರೀಖಿನಿಂದ ಈ ಹೊಸ ಕಾರ್ಮಿಕ ನೀತಿ ಜಾರಿಗೆ ಬರಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಈ ಹೊಸ ಕಾರ್ಮಿಕ ನೀತಿ ಜಾರಿಗೆ ಬಂದಲ್ಲಿ, ವೇತನ, ಭವಿಷ್ಯ ನಿಧಿ, ರಜೆ ದಿನಗಳಲ್ಲಿ ಭಾರೀ ಬದಲಾವಣೆ ಯಾಗಲಿದೆ. ಈ ಹೊಸ ಕಾರ್ಮಿಕ ನೀತಿ ಭಾರೀ ಸಂಚಲನ ಮೂಡಿಸಿದ್ದು, ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾರ್ಮಿಕರು ಕಾಯುತ್ತಿದ್ದಾರೆ.

ಹೊಸ ಕಾರ್ಮಿಕ ನೀತಿಯ ಅನುಗುಣವಾಗಿ 23 ರಾಜ್ಯಗಳು ಪರಿಷ್ಕತ ಕಾರ್ಮಿಕ ಕಾನೂನು, ನೀತಿ ನಿಬಂಧನೆಗಳನ್ನು ಪ್ರಕಟಿಸಿವೆ. ಕೇಂದ್ರ ಸರ್ಕಾರ 2021 ರ ಫೆಬ್ರವರಿಯಲ್ಲಿ ಈ ಹೊಸ ಕಾರ್ಮಿಕ ನೀತಿ ನಿಬಂಧನೆಗಳನ್ನು ಅಂತಿಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿತ್ತು. ಅಂತಿಮ ಅಧಿಸೂಚನೆ ಹೊರ ಬಿದ್ದ ಬಳಿಕ ಹೊಸ ಕಾರ್ಮಿಕ ನೀತಿ ಅಡಿ ವೇತನ, ಕೈಗಾರಿಕಾ ಸಂಬಂಧ, ಕಾರ್ಮಿಕರ ಸಾಮಾಜಿಕ ಭದ್ರತೆ, ಕಾರ್ಮಿಕರ ಸುರಕ್ಷತೆ ಮತ್ತು ಅರೋಗ್ಯ ಕುರಿತ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿವೆ.

ಇನ್ನು ಕಾರ್ಮಿಕ ಕಲ್ಯಾಣ ನಿಯಮಗಳು ಸಮವರ್ತಿ ಪಟ್ಟಿಯಲ್ಲಿ ಬರುವ ಕಾರಣ, ಕೇಂದ್ರ ಸರ್ಕಾರವೂ ನಿಯಮಗಳನ್ನು ರೂಪಿಸಬಹುದು. ಆಯಾ ರಾಜ್ಯಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ಸಹ ನಿಯಮಗಳನ್ನು ರೂಪಿಸಬಹುದು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ