ದುಫದಾಳದ ಚರ್ಚ್ ಪಕ್ಕದಲ್ಲಿರುವ ಮೈದಾನದಲ್ಲಿ ರಾತ್ರಿಯ ವೇಳೆ ಕಿಡಿಗೇಡಿಗಳು ಮದ್ಯಪಾನ ಮಾಡಿ ಬಾಟಲಿಗಳನ್ನು ಒಡೆದು ಹೋಗುತ್ತಿದ್ದಾರೆ. ಇದರಿಂದ ಇಲ್ಲಿ ಓಡಾಡುವಂತಹ ಜನರಿಗೆ ತೊಂದರೆಯಾಗುತ್ತಿದೆ ಹಾಗಾಗಿ ಇಂದು ಕರ್ನಾಟಕ ವಿಶ್ವನಿರ್ಮಾಣ ಸೇನೆ ದುಫದಾಳ ಗ್ರಾಮ ಘಟಕ ವತಿಯಿಂದ ಮೈದಾನದಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ದುಫದಾಳದ ಚರ್ಚ್ ಪಕ್ಕದಲ್ಲಿರುವ ಮೈದಾನದಲ್ಲಿ ರಾತ್ರಿಯ ವೇಳೆ ಕಿಡಿಗೇಡಿಗಳು ಮದ್ಯಪಾನ ಮಾಡಿ ಬಾಟಲಿಗಳನ್ನು ಒಡೆದು ಎಲ್ಲಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಅಲ್ಲಿ ಆಟವಾಡಲು ಹೋಗುವ ಮಕ್ಕಳು ಹಾಗೂ ಯುವಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಇದನ್ನು ಅರಿತ ಕರ್ನಾಟಕ ವಿಶ್ವನಿರ್ಮಾಣ ಸೇನೆ ದುಫದಾಳ ಗ್ರಾಮ ಘಟಕ ವತಿಯಿಂದ ಮೈದಾನದಲ್ಲಿ ಸ್ವಚ್ಛತಾಕಾರ್ಯವನ್ನು ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಗೋಕಾಕ ತಾಲೂಕ ಕಾರ್ಯದರ್ಶಿಗಳಾದ ಮಾನಿಂಗ್ ಕರಿಗಾರ, ಕೆಲವರು ಸಂಜೆ 7 ಗಂಟೆಯ ನಂತರ ಚರ್ಚ್ ಪಕ್ಕದಲ್ಲಿ ಇರುವ ಮೈದಾನದಲ್ಲಿ ಪುಂಡರು ಕುಳಿತು ಮದ್ಯಪಾನ ಮಾಡಿ ಖಾಲಿ ಬಾಟಲಿಗಳನ್ನು ಒಡೆದು ಬಹಿರ್ದಿಸೆ ಹಾಗೂ ಮೂತ್ರ ವಿಸರ್ಜನೆ ಮಾಡಿ ಹೋಗುತ್ತಿದ್ದಾರೆ.