ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೀಕೆಂಡ್ ಡ್ರಗ್ಸ್ ಪಾರ್ಟಿಗಳಿಗೆ ಎಷ್ಟೇ ಬಿಸಿ ಮುಟ್ಟಿಸಿದರೂ ನಿಂತಿಲ್ಲ. ಹಲಸೂರಿನ ಜಿಟಿ ಮಾಲ್ ಬಳಿ ಇರುವ ದಿ ಪಾರ್ಕ್ ಹೋಟೆಲ್‍ನಲ್ಲಿ ತಡರಾತ್ರಿ ಡ್ರಗ್ಸ್ ಪಾರ್ಟಿ ನಡೆಯುತ್ತಿತ್ತು ಎಂಬ ಅನುಮಾನದ ಮೇರೆಗೆ ಹಲಸೂರು ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ದಾಳಿ ನಡೆಸಿದ ಪೊಲೀಸರು, ಬಾಲಿವುಡ್ ನಟ ಮಗ ಸೇರಿದಂತೆ, 50ಕ್ಕೂ ಹೆಚ್ಚು ಯುವಕ, ಯುವತಿಯರನ್ನು ವಶಕ್ಕೆ ಪಡೆದು ಮೆಡಿಕಲ್ ಟೆಸ್ಟ್‌ಗೆ ಒಳಪಡಿಸಿದ್ದಾರೆ. ಅವರಲ್ಲಿ ಐವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಅರೆಸ್ಟ್ ಮಾಡಲಾಗಿದೆ.
Laxmi News 24×7