Breaking News

ನೂಪುರ್ ಶರ್ಮಾ ಪ್ರತಿಕೃತಿ ಗಲ್ಲಿಗೇರಿಸಿದ ಪ್ರಕರಣ – ಮೂವರು ದುಷ್ಕರ್ಮಿಗಳು ವಶಕ್ಕೆ

Spread the love

ಬೆಳಗಾವಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ಗಲ್ಲಿಗೇರಿಸಿದ್ದ ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಮೂವರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದೇಶಪಾಂಡೆ ಗಲ್ಲಿಯ ಮೊಹ್ಮದ್ ಶೋಯೆಬ್ ಅಬ್ದುಲ್ ಗಫರ್ ಹಕೀಮ್, ಅಮನ್ ಮೊಕಾಶಿ ಹಾಗೂ ಅರ್ಬಾಜ್ ಮೊಕಾಶಿ ವಶಕ್ಕೆ ಪಡೆಯಲಾದ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೇಶಪಾಂಡೆ ಗಲ್ಲಿಯ ಕಾಂಪ್ಲೆಕ್ಸ್‌ಗೆ ನುಗ್ಗಿ ಹಗ್ಗ ಕಟ್ಟಿ ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಲಾಗಿತ್ತು. ಕಾಂಪ್ಲೆಕ್ಸ್ ಒಳಗೆ ನುಗ್ಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 9ರ ರಾತ್ರಿ 10.54ಕ್ಕೆ ಕಾಂಪ್ಲೆಕ್ಸ್‌ಗೆ ನುಗ್ಗಿ ಮಧ್ಯರಾತ್ರಿ ವೇಳೆ ಹಗ್ಗ ಕಟ್ಟಿ ಪ್ರತಿಕೃತಿ ನೇತು ಹಾಕಿದ್ದರು. ಕ್ಯಾಮೆರಾದ ದೃಶ್ಯಾವಳಿಗಳು ಹಾಗೂ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.


Spread the love

About Laxminews 24x7

Check Also

ಒಂದೂವರೆ ವರ್ಷದಲ್ಲಿ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಎಸ್.ಜಿ.ನಂಜಯ್ಯನಮಠ

Spread the loveರಾಯಚೂರು: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ