ಬೆಂಗಳೂರು : ಇಂದು ರಾಜ್ಯಸಭೆ ಚುನಾವಣೆ ಹಿನ್ನೆಲೆ ವಿಧಾನ ಸೌಧಕ್ಕೆ ಜೆಡಿಎಸ್ ಶಾಸಕರು ಆಗಮಿಸಿದ ಬಳಿಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ ಆತ್ಮಸಾಕ್ಷಿಯ ಮತಗಳು ನಮಗೆ ಬರುತ್ತದೆ ಎಂದರು.
ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು ನಾಳೆಯಿಂದ ಕರ್ನಾಟಕದಲ್ಲಿ ಹೊಸ ಚ್ಯಾಪ್ಟರ್ ಶುರುವಾಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಮತದಾನ ಮಾಡುತ್ತಿದ್ದಾರೆ.
ವಿಧಾನಸೌಧದ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದ್ದು, ಬಿಜೆಪಿ 31, ಕಾಂಗ್ರೆಸ್ 10 ಹಾಗೂ ಜೆಡಿಎಸ್ ಒಂದು ಮತಗಳು ಈವರೆಗೆ ಚಲಾವಣೆ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಮಾಧುಸ್ವಾಮಿ, ಪ್ರಭು ಚೌಹ್ಹಾಣ್ , ಶಾಸಕ ಕೆ.ಎಸ್ ಈಶ್ವರಪ್ಪ ಸೇರಿದಂತೆ ಹಲವರು ಆಗಮಿಸಿ ಮತದಾನ ಮಾಡಿದರು.