Breaking News

‘ವಿಕ್ರಂ’ ಮುಂದೆ ‘ಕೆಜಿಎಫ್ 2’ ಬಚ್ಚಾ: ಮತ್ತೆ ಖ್ಯಾತೆ ತೆಗೆದ ಕಮಾಲ್!

Spread the love

ಎರಡು ದಕ್ಷಿಣದ ಸಿನಿಮಾಗಳು ಭಾರತದ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ‘ಕೆಜಿಎಫ್ 2’ ಬಾಕ್ಸಾಫೀಸ್‌ನಲ್ಲಿ ದಾಂಧಲೆ ಎಬ್ಬಿಸಿದ್ದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನೊಂದು ಕಡೆ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ಕಮಲ್ ಹಾಸನ್ ಅಭಿನಯದ ‘ವಿಕ್ರಂ’ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ.

ದಕ್ಷಿಣ ಭಾರತದಲ್ಲಿ ಎರಡು ಸಿನಿಮಾಗಳ ವಿಜಯೋತ್ಸವ ನಡೆಯುತ್ತಿದೆ. ‘ಕೆಜಿಎಫ್ 2’ ಉತ್ತರದಲ್ಲೂ ದಾಖಲೆ ಬರೆದು ಬಂದಿದೆ. ಇನ್ನೊಂದು ಕಡೆ ‘ವಿಕ್ರಂ’ ವಿದೇಶದಲ್ಲಿಯೂ ಅಬ್ಬರಿಸುತ್ತಿದೆ. ದಕ್ಷಿಣದಲ್ಲಿ ಈ ಎರಡೂ ಸಿನಿಮಾ ಗೆಲುವಿನ ಖುಷಿಯಲ್ಲಿದ್ದರೆ, ಅದೇ ಉತ್ತರದ ವಿವಾದಾತ್ಮಕ ವಿಮರ್ಶಕ ‘ಕೆಜಿಎಫ್ 2’ ಸಿನಿಮಾ ವಿರುದ್ಧ ಮತ್ತೆ ತಿರುಗಿಬಿದ್ದಿದ್ದಾರೆ.

ಕನ್ನಡದ ಮಟ್ಟಿಗೆ ‘ಕೆಜಿಎಫ್ 2’ ಸಾಧನೆ ಬಹಳ ದೊಡ್ಡದೇ. ಕನ್ನಡಿಗರಷ್ಟೇ ಅಲ್ಲ. ಇಡೀ ವಿಶ್ವದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳೂ ಕೂಡ ‘ಕೆಜಿಎಫ್ 2’ ಸಿನಿಮಾವನ್ನು ನೋಡಿ ಮೆಚ್ಚಿದ್ದಾರೆ. ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ಗೆ ಭೇಷ್ ಎಂದಿದ್ದಾರೆ. ಹೀಗಿದ್ದರೂ ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕಮಾಲ್ ಆರ್ ಖಾನ್ ‘ಕೆಜಿಎಫ್ 2’ ವಿರುದ್ಧ ಇಲ್ಲ ಸಲ್ಲದ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ