Breaking News

ಯುವಕನ ಮಾತಿನಿಂದ ಯುವತಿಗೆ ಪ್ರೀತಿಯ ನಾಟಕ, ದೈಹಿಕ ಸಂಪರ್ಕ ನಡೆಸಿ ಸ್ನೇಹಿತರಾಗಿ ಇರೋಣ ಎಂದ ಎಂಜಿನಿಯರ್

Spread the love

ಬಳ್ಳಾರಿ : ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿದ ಯುವತಿಯ ಜೊತೆ ದೈಹಿಕ ಸಂಪರ್ಕ ನಡೆಸಿ ಬಳಿಕ ಆಕೆಗೆ ವಂಚಿಸಿರುವ ಆರೋಪದಡಿ ಬಳ್ಳಾರಿ ಕೆಎಂಎಫ್​ನ ಅಸಿಸ್ಟೆಂಟ್ ಟೆಕ್ನಿಕಲ್ ಎಂಜಿನಿಯರ್​ವೊಬ್ಬರನ್ನು ಇಲ್ಲಿನ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

 

ಪಿ.ವೆಂಕಟೇಶ್ ಎಂಬುವರೆ ಬಂಧಿತ ಎಂಜಿನಿಯರ್. ರಾಯಚೂರು ಮೂಲದ ಆರೋಪಿಯು ಬಳ್ಳಾರಿಯ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಬಳಿಕ ಮದುವೆಯಾಗುವುದಾಗಿ ಹೇಳಿಕೊಂಡು ನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ತದನಂತರ ಯುವತಿ ಮದುವೆಯಾಗೋಣ ಎಂದಾಗ ಅದೆಲ್ಲ ಸದ್ಯ ಬೇಡ, ಹೀಗೆಯೇ ಸ್ನೇಹಿತರಾಗಿ ಇರೋಣ ಎಂದು ಹೇಳಿ ನಿರಂತರ ಅತ್ಯಾಚಾರ ಮಾಡಿ ಮೋಸ ಮಾಡಿದ್ದಾನೆ ಎಂದು ದೂರಲಾಗಿದೆ.

ಯುವಕನ ಮಾತಿನಿಂದ ಯುವತಿಗೆ ಪ್ರೀತಿಯ ನಾಟಕವಾಡಿ ವಂಚನೆ ಆಗಿರುವುದು ಗೊತ್ತಾಗಿದೆ. ಹೀಗಾಗಿ, ಪ್ರೇಮದ ವಿಚಾರವನ್ನು ಮನೆಯವರಲ್ಲಿ ತಿಳಿಸಿದ್ದಾಳೆ. ವಿಷಯ ತಿಳಿದ ಪೋಷಕರು ವೆಂಕಟೇಶ್​​ ಬಳಿ ತಮ್ಮ ಮಗಳನ್ನು ಮದುವೆ ಆಗುವಂತೆ ಕೇಳಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ತಾನು ಮದುವೆಯಾಗುವುದಿಲ್ಲ ಎಂದು ಎಂಜಿನಿಯರ್ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ.

ಕೊನೆಗೆ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದಾಳೆ. ಪೊಲೀಸರು ಆರೋಪಿ ವೆಂಕಟೇಶ್ ಹಾಗೂ ಆತನಿಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಸಹೋದರರಾದ ರಾಮಕೃಷ್ಣ, ತಾಯಣ್ಣ ಅವರ ಮೇಲೆ ಎಫ್​ಐಆರ್ ದಾಖಲಿಸಿ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ


Spread the love

About Laxminews 24x7

Check Also

ಕಂಗ್ರಾಗಳಗಲ್ಲಿಯ ಪಿಜಿಯಲ್ಲಿ ವಿದ್ಯಾರ್ಥಿ ನಿ ನೇಣು ಬಿಗಿದುಕೊಂಡ ಘಟನೆ ನಡೆದಿದೆ.

Spread the loveಕಂಗ್ರಾಗಳಗಲ್ಲಿಯ ಪಿಜಿಯಲ್ಲಿ ವಿದ್ಯಾರ್ಥಿಯೋರ್ವವಳು ಆತ್ಮಹ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಸವದತ್ತಿ ಮೂಲದ ಪವಿತ್ರಾ ಎಂಬ ವಿಧ್ಯಾರ್ಥಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ