Breaking News

ಬೈಕ್ ಸಮೇತ ಕೆರೆಗೆ ಬಿದ್ದು ಸವಾರ ಸಾವು

Spread the love

ಹಾವೇರಿ: ತಿರುವೊಂದರಲ್ಲಿ ಸಂಭವಿಸಿದ ಅಪಘಾತದಿಂದಾಗಿ ಸವಾರನೊಬ್ಬ ಬೈಕ್​ ಸಮೇತ ಕೆರೆಗೆ ಬಿದ್ದು ಸಾವಿಗೀಡಾಗಿದ್ದಾನೆ. ಹಾವೇರಿ ಜಿಲ್ಲೆಯಲ್ಲಿ ಇಂಥದ್ದೊಂದು ಅಪಘಾತ ಸಂಭವಿಸಿದೆ.

ಬಾಷಾಸಾಬ್​ ಜಿಗಳೂರ (49) ಅಪಘಾತದಲ್ಲಿ ಸಾವಿಗೀಡಾದ ಬೈಕ್ ಸವಾರ.

ಬಾಷಾಸಾಬ್​ ಸವಣೂರು ಪಟ್ಟಣದ ಕಡೆಯಿಂದ ಹಾವೇರಿಯತ್ತ ಸಾಗುತ್ತಿದ್ದಾಗ ಸವಣೂರು ತಾಲೂಕಿನ ಕಲ್ಮಡವು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

ಕಲ್ಮಡವು ಗ್ರಾಮದ ಬಳಿ ತಿರುವು ಇದ್ದಿದ್ದರಿಂದ ತಕ್ಷಣಕ್ಕೆ ಬೈಕ್​ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಗದೆ ಅದು ಸೀದಾ ರಸ್ತೆ ಪಕ್ಕದ ಕೆರೆಗೆ ಹೋಗಿ ಬಿದ್ದಿದೆ. ಸ್ಥಳೀಯರು ಶವವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.


Spread the love

About Laxminews 24x7

Check Also

ಔತಣ ಕೂಟದಲ್ಲಿ ಪಾಲ್ಗೊಂಡು, ಡಿಕೆಶಿಗೆ ಅಭಿನಂದಿಸಿದ ಹೆಬ್ಬಾಳಕರ್, ಹಟ್ಟಿಹೊಳಿ

Spread the loveಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ