ಬೆಳಗಾವಿ: ನಗರದಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಕುಡುಕನನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಕ್ಲಬ್ ರಸ್ತೆಯ ನೀರಾವರಿ ಇಲಾಖೆಯ ಕಚೇರಿ ಎದುರು ಶುಕ್ರವಾರ ನಡೆದಿದೆ.
ಹಿರಿಯ ಅಧಿಕಾರಿಗಳು ಮಾತ್ರವಲ್ಲದೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾಮಾನ್ಯ ಜನರು ಸಂಚರಿಸುತ್ತಾರೆ. ಇಂಥ ಸ್ಥಳದಲ್ಲಿ ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಕುಡುಕನಿಗೆ ಸಾರ್ವಜನಿಕರು ಥಳಿಸಿದ್ದಾರೆ.
ವಾಹನ ದಟ್ಟನೆ ಕಂಡ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಪಟ್ಟರೂ ಕುಡಿದ ಮತ್ತಿನಲ್ಲಿದ್ದ ಕುಡುಕ ಅವರೊಂದಿಗೆ ವಾಗ್ವಾದ ಮಾಡಿದ್ದಾನೆ. ಸ್ಥಳೀಯರ ಸಹಕಾರದಿಂದ ಸಂಚಾರ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ದರು.