ಗೋಕಾಕ್ ಆರ್‍ಟಿಓ ಕಚೇರಿಯಲ್ಲಿ ಏಜೆಂಟರುಗಳ ಹಾವಳಿ ಹೆಚ್ಚಾಗಿದೆ. ಇಲ್ಲಿಗೆ ಬರುವ ಸಾರ್ವಜನಿಕರಿಂದ ಹಣವನ್ನು ಸುಲಿಗೆ ಮಾಡಲಾಗುತ್ತಿದ್ದು, ಲಂಚಾವತಾರ ಹೆಚ್ಚಾಗುತ್ತಿದೆ. ಹಾಗಾಗಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ್ ತಾಲೂಕಾ ಘಟಕದಿಂದ ಆರ್‍ಟಿಒ ರವರಿಗೆ ಮನವಿ ಮಾಡಿದರು.
ಗೋಕಾಕ್‍ನ ಆರ್‍ಟಿಒ ಕಚೇರಿಯಲ್ಲಿ ದಿನದಿಂದ ದಿನಕ್ಕೆ ಏಜೆಂಟರ ಹಾವಳಿ ಹೆಚ್ಚಾಗುತ್ತಿದೆ. ಸಾರ್ವಜನಿಕರ ಕೆಲಸವಾಗಬೇಕಾದರೆ ಇಲ್ಲಿ ಹೆಚ್ಚಿನ ಹಣವನ್ನು ಸಾರ್ವಜನಿಕರಿಂದ ಏಜೆಂಟರು ಪೀಕುತ್ತಿದ್ದಾರೆ. ಇದರಿಂದ ಲಂಚಾವತಾರ ಹೆಚ್ಚಾಗುತ್ತಿದೆ. ಇನ್ನು ಬಡವರು ಲೈಸೆನ್ಸ್ ಹೊಂದುವುದು ಕನಸಾಗಿಯೇ ಉಳಿಯುತ್ತಿದೆ. ಇದರಿಂದ ಎಷ್ಟೋ ಜನ ಲೈಸೆನ್ಸ್ ಇಲ್ಲದೇ ವಾಹನಗಳನ್ನು ಓಡಿಸುತ್ತಿದ್ದಾರೆ. ಇದರಿಂದ ಸರಕಾರ ವ್ಯವಸ್ಥೆಯೇ ಬುಡಮೇಲಾಗುತ್ತಿದೆ.
ಹಾಗಾಗಿ ಕೂಡಲೇ ಇಂಥ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ಆರ್‍ಟಿಒ ರವರಿಗೆ ಮನವಿ ಮಾಡಿದ್ದಾರೆ.