ಭೂತರಾಮನಹಟ್ಟಿ, ಹಿರೇಬಾಗೇವಾಡಿ ಎರಡು ಕಡೆ ವಿವಿ ಕಾರ್ಯಚಟುವಟಿಕೆ
ಹೆಚ್ಚುವರಿ ಕಟ್ಟಡಕ್ಕಾಗಿ ಹಿರೇಬಾಗೇವಾಡಿಗೆ ಸ್ಥಳಾಂತರ
ಅಭಿವೃದ್ದಿ ದೃಷ್ಠಿಯಿಂದ ಈ ನಿರ್ಧಾರ
ಬೆಳಗಾವಿ: ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಹಿರೇಬಾಗೇವಾಡಗೆ ಸ್ಥಳಾಂತರ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಸದ್ಯ ಭೂತರಾಮನಹಟ್ಟಿಯಲ್ಲಿರುವ ವಿಶ್ವ ವಿದ್ಯಾಲಯ ಅರಣ್ಯ ಪ್ರದೇಶದ ಜಾಗದ ಅಧೀನದಲ್ಲಿರುವುದಿಂದ ಹೆಚ್ಚುವರಿ ಕಟ್ಟಡ, ಮತ್ತೀತರ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ಹಿರೇಬಾಗೇವಾಡಿಗೆ ವಿವಿ ಸ್ಥಳಾಂತರಕ್ಕೆ ಮುಂದಾಗಿದೆ. ಆದ್ರೆ ವಿವಿ ಎಲ್ಲ ವಿಭಾಗಗಳು ಸಂಪೂರ್ಣ ಪ್ರಮಾಣ ಸ್ಥಳಾಂತರವಾಗಲ್ಲ. ಮೂಲ ವಿವಿಗೆ ಯಾವ ಧಕ್ಕೆ ಬರಲ್ಲ ಎಂದಿದ್ದಾರೆ.
ಭೂತರಾಮನಹಟ್ಟಿಯಲ್ಲಿ ಈ ಹಿಂದಿನಂತೆ ವಿವಿ ಕಾರ್ಯ ಚಟುವಟಿಕೆಗಳು ಹೇಗೆ ನಡೆಯಲಿವೆ. ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕಾಗಿ ಹಿರೇಬಾಗೇವಾಡಿಯಲ್ಲಿ ಜಾಗ ನೀಡಲಾಗಿದೆ. ವಿಶ್ವ ವಿದ್ಯಾಲಯ ಅಭಿವೃದ್ದಿಗಾಗಿ ಸರ್ಕಾರ ಅಗತ್ಯ ಅನುದಾನ ನೀಡಿದೆ. ಜಾಗದ ಕೊರತೆಯಿಂದ ಅನುದಾನ ಬಳಸಿಕೊಳ್ಳಲು ಸಧ್ಯವಾಗಿರಲಿಲ್ಲ. ಸದ್ಯ ಹೆಚ್ಚುವರಿ ಕಟ್ಟಡಗಳನ್ನು ಹಿರೇಬಾಗೇವಾಡಿಯಲ್ಲಿ ನಿರ್ಮಿಸಲು ಸಹಕಾರಿಯಾಗಲಿದೆ. ಈ ಬಗ್ಗೆ ಆತಂಕ ಬೇಡ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವನ್ನು ಹಿರೇಬಾಗೇವಾಡಿಗೆ ಸ್ಥಳಾಂತರ ಮಾಡಲು ಗ್ರೀನ್ ಸಿಗ್ನಲ್ ನೀಡಿ ಸರ್ಕಾರ ಇಂದು ಆದೇಶ ಹೊರಡಿತ್ತು.