ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಪ್ರಶಾಂತ್ ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ದೂರು ದಾಖಲಿಸಿದ್ದಾರೆ.
ಚಾಮರಾಜ ಪೇಟೆ ಪೊಲೀಸ್ ಠಾಣೆಯಲ್ಲಿ ಜಮೀರ್ ದೂರು ದಾಖಲಿಸಿದ್ದು, ಪೊಲೀಸರು ದೂರಿನ ಆಧಾರದ ಅನ್ವಯ ಎನ್‍ಸಿಆರ್ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಮಾಧ್ಯಮಗಳಲ್ಲಿ ಬಂದ ಸಂಬರಗಿ ಅವರ ಮಾತಿನ ವಿಡಿಯೋಗಳನ್ನು ತಮ್ಮ ದೂರಿನೊಂದಿಗೆ ಜಮೀರ್ ಸಾಕ್ಷಿಯಾಗಿ ನೀಡಿದ್ದಾರೆ.
ಸಂಬರಗಿ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಲು ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳುವಂತೆ ತಮ್ಮ ವಕೀಲರೊಂದಿಗೆ ಜಮೀರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಸಂಬರಗಿ ಆಧಾರ ರಹಿತ ಆರೋಪ ಮಾಡಿದ್ದು, ನಾನು ಡ್ರಗ್ಸ್ ಪ್ರಕರಣದ ಆರೋಪಿ ನಟಿ ಸಂಜನಾ ಜತೆ ಶ್ರೀಲಂಕಾದ ಕ್ಯಾಸಿನೋದಲ್ಲಿ ಕಾಣಿಸಿಕೊಂಡಿದ್ದೆ ಎಂದಿದ್ದಾರೆ. ಈ ಮೂಲಕ ನನ್ನ ತೇಜೋವಧೆ ಮಾಡಿದ್ದು, ಸಂಬರಗಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಜಮೀರ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಜಮೀರ್ ಅಹಮದ್ ಸರ್ ದಯವಿಟ್ಟು ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ. ಆ ಬೀದಿ ನಾಯಿ ನನ್ನ ಹಿಂದೆ ಯಾಕೆ ಬಿದ್ದಿದ್ದಾನೆ ಗೊತ್ತಿಲ್ಲ. ನಾನು ತುಂಬಾ ಕಷ್ಟಪಟ್ಟು ಮೇಲೆ ಬಂದ ಕಲಾವಿದೆ. ಆದರೆ ಇದರಲ್ಲಿ ನನ್ನ ತಪ್ಪು ಏನಿದೆ. ನಾನು ಸೆಲೆಬ್ರಿಟಿ ಆಗಿರೋದೆ ತಪ್ಪಾ. ನನಗೆ ತುಂಬಾ ಕಷ್ಟ ಆಗುತ್ತಿದೆ. ದಯವಿಟ್ಟು ಪ್ರಶಾಂತ್ ಸಂಬರಗಿಯನ್ನು ಬಿಡಬೇಡಿ ಎಂದು ಕೈ ಮುಗಿದು ಸಂಜನಾ ಕಣ್ಣೀರು ಹಾಕಿದ್ದರು
Laxmi News 24×7