ಟಿಸಿ ಸರಿಪಡಸಲು ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಹೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಅಥಣಿಯಲ್ಲಿ ನಡೆದಿದೆ.
ಹೌದು ಟಿಸಿ ಸರಿಪಡಿಸಲು ಹೆಸ್ಕಾಂ ಸಿಬ್ಬಂದಿಗಳು ಹಣ ಪಡೆಯುತ್ತಿದ್ದಾರೆ ಎಂದ ಆರೋಪಿಸಿದ ಅಥಣಿ ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದ ಅಥಣಿ ಶಾಖೆ ಮುಂದೆ ರೈತರು ಧರಣಿ ನಡೆಸಿದರು. ಹಲವು ರೈತರಿಂದ ಹಣ ಪಡೆದು ಸರ್ವಿಸ್ ಕೊಟ್ಟಿದ್ದು ಬಡ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೆಲ ತಿಂಗಳ ಹಿಂದμÉ್ಟ 80 ಕೋಟಿ ಅವ್ಯವಹಾರ ಆರೋಪದ ಅಡಿಯಲ್ಲಿ 21 ಜನರನ್ನು ಸರ್ಕಾರ ಅಮಾನತ್ತು ಮಾಡಿತ್ತು. ಇಷ್ಟಾದರೂ ಕೂಡ ಇಲ್ಲಿನ ಸಿಬ್ಬಂದಿ ಇನ್ನು ಬುದ್ಧ ಕಲಿತಿಲ್ಲ. ರೈತರು ಮುತ್ತಿಗೆ ಹಾಕಿದ್ದ ವೇಳೆ ಸಿಡಿಲು ಬಡಿದು ಅಪಾರ ಹಾನಿಯಾಗಿದೆ ಎಂದು ಸಬೂಬು ಹೇಳಲು ಬಂದ ಹೆಸ್ಕಾಂ ಅಧಿಕಾರಿಯನ್ನು ರೈತರು ತರಾಟೆಗೆ ತೆಗೆದುಕೊಂಡರು.