Breaking News

ಹಿಂದೂ ದೇವಸ್ಥಾನಗಳನ್ನು ಕೆಡವಿ ಅದರ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ: ಈಶ್ವರಪ್ಪ

Spread the love

ಚಿಕ್ಕೋಡಿ: ಹಿಂದೂ ದೇವಸ್ಥಾನಗಳನ್ನು ಕೆಡವಿ ಅದರ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಳಲಿ ಮಸೀದಿ ಒಂದೇ ಅಲ್ಲ. ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನ ಪುಡಿ ಮಾಡಿ ಮಸೀದಿಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನಗಳ ಮೇಲೆ ಕಟ್ಟಿರುವ ಒಂದೇ ಒಂದು ಮಸೀದಿಯನ್ನೂ ಬಿಡುವುದಿಲ್ಲ. ಅಂತಹ ಮಸೀದಿಗಳನ್ನು ಒಡೆದು 36 ಸಾವಿರ ದೇವಸ್ಥಾನವನ್ನು ಮತ್ತೆ ಕಟ್ಟುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಸರ್ಕಾರದಿಂದ ಸರ್ವೆ ಕಾರ್ಯ ನಡೆಯುತ್ತಿದೆ. ಕಾಶಿಯಲ್ಲೂ ಸರ್ವೆ ಕಾರ್ಯ ಆರಂಭವಾಗಿದೆ. ಕಾನೂನು ಬದ್ಧವಾಗಿ ಕೋರ್ಟ್ ಆದೇಶ ಪಡೆದು ಎಲ್ಲವನ್ನೂ ಮಾಡುತ್ತೇವೆ ಎಂದಿದ್ದಾರೆ.


Spread the love

About Laxminews 24x7

Check Also

ಬೈಕ್ ಅಪಘಾತ ಯುವಕ ಬಲಿ

Spread the loveಚಿಕ್ಕೋಡಿ : ರಸ್ತೆಯಲ್ಲಿ ಗುಂಡಿ ತಪ್ಪಿ ಹೋಗಿ ಮುಂದೆ ಬರುತ್ತಿದ್ದ ಇನ್ನೊಂದು ಬೈಕ್‌ಗೆ ಪರಸ್ಪರ ಡಿಕ್ಕಿಯಾದ ಪರಿಣಾಮ ವಡ್ರಾಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ