Breaking News

K.L.E.ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ

Spread the love

ಬೆಳಗಾವಿಯ ಪ್ರತಿಷ್ಠಿತ ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿಯಲ್ಲಿ (Karnataka Lingayat Education Society) ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆ ಸೇರಿ ಒಟ್ಟು 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸ್ನಾತಕೋತ್ತರ ಪದವೀಧರರಿಗೆ ಉತ್ತಮ ಅವಕಾಶವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್​ 4 ಕಡೆಯ ದಿನಾಂಕವಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ

ಸಂಸ್ಥೆಯ ಹೆಸರು: ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿ (ಕೆಎಲ್‌ಇ ಸೊಸೈಟಿ)
ಹುದ್ದೆಗಳ ಸಂಖ್ಯೆ: 14
ಉದ್ಯೋಗ ಸ್ಥಳ: ಬೆಳಗಾವಿ
ಹುದ್ದೆಯ ಹೆಸರು: ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್
ಸಂಬಳ: ಕೆಎಲ್​ಇ ಸೊಸೈಟಿ ನಿಯಮಗಳ ಪ್ರಕಾರ

ಹುದ್ದೆಗಳು ಹುದ್ದೆ ಸಂಖ್ಯೆ ವಿದ್ಯಾರ್ಹತೆ
ಪ್ರಾಧ್ಯಾಪಕರು 3 ಎಂಡಿ (ಆಯುರ್ವೇದಿಕ್​)
ಸಹ ಪ್ರಾಧ್ಯಾಪಕರು 3 ಎಂಡಿ (ಆಯುರ್ವೇದಿಕ್​)
ಸಹಾಯಕ ಪ್ರಾಧ್ಯಾಪಕರು 3 ಎಂಡಿ (ಆಯುರ್ವೇದಿಕ್​)
ಸಹಾಯಕ ಪ್ರಾಧ್ಯಾಪಕರು 1 ಎಂ.ಎ (ಸಂಸ್ಕೃತ)
ಲೈಬ್ರೆರಿಯನ್ 1 ಎಂಎಲ್​ಐಎಸ್ಸಿ
ಸಹಾಯಕ ಲೈಬ್ರೆರಿಯನ್​ 1 ಬಿಎಲ್‌ಐಎಸ್ಸಿ
ರೆಸಿಡೆಂಟ್ ಮೆಡಿಕಲ್​ ಆಫೀಸ್ 2 ಬಿಎಎಂಎಸ್​​

 

ವಯೋಮಿತಿ: ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು KLE ಸೊಸೈಟಿ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು

ವಯಸ್ಸಿನ ಸಡಿಲಿಕೆ:
ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿ ನಿಯಮಗಳ ಪ್ರಕಾರ

ಇದನ್ನು : ತುಮಕೂರು ಕೋರ್ಟ್​ನಲ್ಲಿ 51 ಹುದ್ದೆ ನೇಮಕಾತಿ; ಎಸ್​ಎಸ್​ಎಲ್​ಸಿ ಆಗಿದ್ರೆ ಸಾಕು

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವಿದ್ಯಾರ್ಹತೆ ಮತ್ತು ಅನುಭವ
ಹೊಸ ದೆಹಲಿ ಎನ್​ಸಿಐಎಸ್​ಎಂನ ನಿಯಾಮಾವಳಿ ಅನುಸಾರವಾಗಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹಿಂದಿರಬೇಕು

ಸೂಚನೆ
ಹೆಚ್ಚಿನ ಮಾಹಿತಿಗೆ 9164648888ಗೆ ಸಂಪರ್ಕಿಸಬಹುದಾಗಿದೆ
ಜೊತೆಗೆ ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್​ ಅನ್ನು kleayurvedackd@rediffmail.comಗೆ ಕೂಡ ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗೆ ಕಳುಹಿಸಬಹುದು


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ