Breaking News

ಬೆಳಗಾವಿಯಲ್ಲಿ ಪ್ರಮುಖ ಸಭೆ,ಬಾಲಚಂದ್ರ ಜಾರಕಿಹೊಳಿ ಭಾಗಿ,ರಮೇಶ್ ಜಾರಕಿಹೊಳಿ ಹಾಗೂ ಚುನಾವಣೆ ಬಗ್ಗೆ ಹೇಳಿದ್ದೇನು? ಕಂಪ್ಲೀಟ್ ಡೀಟೇಲ್ಸ್

Spread the love

ಬೆಳಗಾವಿ: ಇಂದು ಬೆಳಗಾವಿಯಲ್ಲಿ ಬಿಜೆಪಿಯ ಉನ್ನತ ಮಟ್ಟದ ಸಭೆ ಸಮಾರಂಭ ನಡೆಯಿತು, ಅಲ್ಲಿ ಬೆಳಗಾವಿಯ ಎಲ್ಲಾ ಜಿಲ್ಲಾ ನಾಯಕರು ಸೇರಿದಂತೆ ಅನೇಕ ನಾಯಕರು ಕೂಡ ಸೇರಿದ್ದರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಈ ಒಂದು ಸಭೆಗೆ ಹಾಜರಿದ್ದರು.

 

ಇನ್ನು ಪತ್ರಿಕಾ ಗೋಷ್ಠಿ ಶುರು ಆಗೊಕ್ಕು ಮುಂಚೆಯೇ ನ್ನಡೆದದ್ದೆ ಒಂದು ಪ್ರಮುಖ ಬೆಳವಣಿಗೆ,

ಹೌದು ಅದೇನಪ್ಪಾ ಅಂದ್ರೆ ಬಾಲಚಂದ್ರ ಜಾರಕಿಹೊಳಿ ಯವರ ಸಭೆಗೆ ಆಗಮನ ವಿಶೇಷವಾಗಿ ಜಾರಕಿಹೊಳಿ ಸಹೋದರ ರನ್ನ ಬಿಜೆಪಿಯ ಕೆಲವು ನಾಯಕರು ಸಭೆ ಸಮಾರಂಭ ಗಳನ್ನ ಬಿಟ್ಟು ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಬೆಳಗಾವಿಯ ಮಾಧ್ಯಮ ವಲಯದಲ್ಲಿ ಚರ್ಚೆಗೆ ಶುರು ಕೂಡ ಆಗಿದೆ,

ಇಲ್ಲಿ ಪ್ರಮುಖ ವಾಗಿ ವಾಯು ವ್ಯ ಶಿಕ್ಷಕರ ಚುನಾವಣೆ ಬಗ್ಗೆ ಮಾತನಾಡಲು ಸಭೆ ಆಯೋಜನೆ ಕೂಡ ಮಾಡಲಾಗಿತ್ತು,

ಈ ಒಂದು ಚುನಾವಣೆ ಯಲ್ಲಿ ಎಲ್ಲರೂ ಬಿಜೆಪಿ ನಾಯಕರು ನಾವು ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ಕೂಡ ವ್ಯಕ್ತ ಪಡಿಸಿದರು

ಆದ್ರೆ ಇಲ್ಲಿ ಪತ್ರಕರ್ತರ ಪ್ರಶ್ನೆ ಗಳನ್ನ ಕೇಳಲು ಪ್ರಾರಂಭ ವಾದಾಗ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೆಲವೊಂದು ಪ್ರಶ್ನೆ ಗಳನ್ನ ಕೇಳಿದ ಪತ್ರಕರ್ತರು

ಚುನಾವಣೆ ಯಾವುದೇ ನಡೆದರೂ ಅದು ಗೆದ್ರು ಅಥವಾ ಸೋತ್ರು ಜಾರಕಿಹೊಳಿ ಸಹೋದರರ ಮೇಲೆ ಬರುತ್ತೆ, ಹಾಗೂ ರಮೇಶ್ ಜಾರಕಿಹೊಳಿ ಅವರು ಬಿಜೆಪಿಗೆ ಸಪೋರ್ಟ್ ಮಾಡ್ತಾರಾ ಎಂಬ ಪ್ರಶ್ನೆ ಕೂಡ ಉದ್ಭವ ವಾಯಿತು.ಅದಕ್ಕೆ ಬಾಲಚಂದ್ರ ಜಾರಕಿಹೊಳಿ ಹೇಳಿದ್ದೇನು ಕೇಳಿ,

ಇನ್ನು ಅಷ್ಟೇ ಅಲ್ಲದೆ ಜಿಲ್ಲಾ ಉಸ್ತುವಾರಿ ಗೋವಿಂದ ಕಾರಜೋಳ ಅವರು ಕೂಡ ಈ ಒಂದು ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದ್ದರು ಮಳೆ ಹಾಗೂ ಚುನಾವಣೆಯ ಬಗ್ಗೆ ಗೋವಿಂದ ಕಾರಜೋಳ ಹೇಳಿದ್ದೇನು ಕೇಳಿ..

 

 

ಇನ್ನು ಅಷ್ಟೇ ಅಲ್ಲದೆ ಲಕ್ಷ್ಮಣ ಸವದಿ ಅವರು ಕೂಡ ಈ ಒಂದು ಸಭೆಯಲ್ಲಿ ಹಾಜರಿದ್ದು ಅವರು ಕೂಡ ಪತ್ರಕರ್ತ ಬಂಧುಗಳ ಪ್ರಶ್ನೆಗೆ ಉತ್ತರಿಸಿದರು ಅವರು ಕೂಡ ನಾವು ಈ ಒಂದು ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆದ್ರೆ ಇಬ್ಬರು ಅಭ್ಯರ್ಥಿ ಗಳು ಕೂಡ ಮೂಲ ಬೆಳಗಾವಿಯವಾರು ಅಲ್ಲ ಇನ್ನೇನು ಚುನಾವಣೆ ರಿಸಲ್ಟ್ ಬಂದ್ಮೇಲೆ ಅಸಲಿ ವಿಚಾರ ಗೊತ್ತಾಗತ್ತೆ

 

 

ಇನ್ನು ಜಾರಕಿಹೊಳಿ ಬಂಧುಗಳು ವಿಶ್ವಾಸ ವ್ಯಕ್ತಪಡಿಸಿದರೆ ಮಾತ್ರ ಇವರು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂಬ ಗುಸು ಪಿಸು ಮಾತುಗಳು ಕೂಡ ಕೇಳಿಬರುತ್ತಿದ್ದವು.

ಇನ್ನು ಕೊನೆಯದಾಗಿ ಹೇಳೋದಂದರೆ ಸಂಪುಟ ವಿಸ್ತರಣೆ ಆಗೋವೇಳೆ ರಮೇಶ ಜಾರಕಿಹೊಳಿ ಮಂತ್ರಿ ಆಗ್ತಾರೆ ಎನ್ನುವ ವಿಷಯ ಹಾಗೂ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂಬ ವಿಷಯಕ್ಕೆ ಇನ್ನು ಕೆಲವೇ ದಿನ ಕಾಯಬೇಕಾಗಿದೆ …. ಎಲ್ಲರಿಗೂ ನಮಸ್ಕಾರ


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ