Breaking News

ಈ ವರ್ಷವೂ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ

Spread the love

ಬೆಂಗಳೂರು: ಇಂದಿನಿಂದ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳು ಪ್ರಾರಂಭವಾಗಿದ್ದು, ಈ ಹೊತ್ತಿನಲ್ಲಿಯೇ ಮಕ್ಕಳಿಗೆ ಈ ಬಾರಿ ಸರ್ಕಾರ ಸೈಕಲ್ ಭಾಗ್ಯ ಯೋಜನೆಯನ್ನು ನಿಲ್ಲಿಸಿದೆ ಎನ್ನಲಾಗುತ್ತಿದೆ.

ಶಾಲೆ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಮೊದಲ 15 ದಿನ ಮಕ್ಕಳಿಗೆ ಆಟದ ಜೊತೆ ಪಾಠವೂ ಇರಲಿದೆ. ಎರಡು ವರ್ಷ ಕೊರೊನಾದಿಂದಾದ ಕಲಿಕಾ ನಷ್ಟವನ್ನು ತುಂಬಲು ಈ ಬಾರಿ 15 ದಿನ ಮುಂಚಿತವಾಗಿ ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಗಳನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗಿದೆ.

ಈ ಎಲ್ಲದರ ಮಧ್ಯೆ ಶಾಲೆಗಳ ಆರಂಭವಾಗುತ್ತಿರುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಈ ಬಾರಿಯೂ ರಾಜ್ಯದ ಮಕ್ಕಳಿಗೆ ಸೈಕಲ್ ಭಾಗ್ಯ ಇಲ್ಲ. ಸಿಎಂ, ಸಚಿವರ, ಶಾಸಕರ ಸಂಬಳ, ಚರ್ಚೆ ಆಗದ ಅಧಿವೇಶನಕ್ಕೆ ಕೋಟಿ, ಕೋಟಿ ಖರ್ಚು ಮಾಡಿರುವ ಸರ್ಕಾರ, ಬಡ ವಿದ್ಯಾರ್ಥಿಗಳಿಗೆ ಸೈಕಲ್ ನೀಡಲು ಕುಂಟು ನೆಪವನ್ನು ಹೇಳುತ್ತಿದೆ. 


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ