ಮೈಸೂರು: ಮೈಸೂರಿನ ಮಾನಸಗಂಗೋತ್ರಿಯ ಮಹಿಳಾ ವಿದ್ಯಾರ್ಥಿನಿಲಯ ಸಮಸ್ಯೆಯ ಆಗರವಾಗಿದೆ.
ಸದ್ಯ ಇಲ್ಲಿನ ವಿದ್ಯಾರ್ಥಿನಿಯರ ಗೋಳು ಹೇಳತೀರದಾಗಿದ್ದು,ಹಾಸ್ಟೆಲ್ ಮುಂದೆ ನಿಂತು ಮೈಸೂರು ವಿವಿ ಕುಲಪತಿಗೆ ಧಿಕ್ಕಾರ ಹಾಕಿದ್ದಾರೆ.
ಅಂದ ಹಾಗೇ ಮಾನಸಗಂಗೋತ್ರಿಯ ಆವರಣದಲ್ಲಿರುವ ಬ್ಲಾಕ್ 1 (ಕಟ್ಟಡ) ರಲ್ಲಿರುವ ಮಹಿಳಾ ವಿದ್ಯಾರ್ಥಿನಿಲಯದ ಹಲವು ಕೊಠಡಿಗಳು ಕಳೆದ ಕೆಲವು ದಿನಗಳಿಂದ ಅವ್ಯವಸ್ಥೆಯಿಂದ ಕೂಡಿವೆ.
ಅದರಲ್ಲೂ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಿಲಯದ ಕೊಠಡಿಗಳಿಗೆ ನೀರು ನುಗ್ಗಿದೆ.ಅಲ್ಲದೆ, ಕೆಲ ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟು ನೀರು ಸೋರುತ್ತಿದೆ. ಜೊತೆಗೆ ಸ್ನಾನದ ಕೊಠಡಿಗಳು ಮತ್ತು ಶೌಚಾಲಯಗಳು ಶಿಥಿಲಗೊಂಡಿರುವುದರಿಂದ ಗೀಸರ್‌ನಂತಹ ಉಪಕರಣಗಳಿಂದ ವಿದ್ಯುತ್ ಶಾಕ ಹೊಡೆಯುತ್ತಿದೆ ಎಂದು ಹಲವು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಇದಲ್ಲದೆ,ಮಳೆ ನೀರಿನ ನಡುವೆ ಸಂಶೋಧನಾ ವಿದ್ಯಾರ್ಥಿಗಳ ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಮಳೆ ನೀರಿನ ನಡುವೆ ವಿದ್ಯಾಭ್ಯಾಸ ಮಾಡಿ, ಮಲಗುವ ಪರಿಸ್ಥಿತಿ ಸ್ನಾತಕೋತ್ತರ ಪದವಿ, ಸಂಶೋಧನಾ ವಿದ್ಯಾರ್ಥಿಗಳದ್ದಾಗಿದೆ.
ಇದರ ಜೊತೆಗೆ ಕಳಪೆ ಗುಣಮಟ್ಟದ ಆಹಾರ ಕೊಡ್ತಾರೆ,ಕುಡಿಯುವ ನೀರಿಲ್ಲ, ಕರೆಂಟ್ ಇಲ್ಲ ನಮ್ಮ ಕಷ್ಟ ಕೇಳೋಕೆ ಯಾರು ಬರ್ತಿಲ್ಲ.ನಿರಂತರ ಮಳೆಯಿಂದ ಕಟ್ಟಡಲ್ಲಿ ನೀರು ಸೋರುತ್ತಿದೆ.ಮಳೆ ನಿಲ್ಲುವ ತನಕ ಕಾಯ್ದು ಕುಳಿತು ಕೊಠಡಿಯಲ್ಲಿ ನಿಲ್ಲುವ ನೀರನ್ನು ಹೊರ ಹಾಕಿ ಮಲಗುವ ಸ್ಥಿತಿ ನಮ್ಮದಾಗಿದೆ ಎಂದು ವಿದ್ಯಾರ್ಥಿನಿಯರ ಆರೋಪವಾಗಿದೆ.