ಮಂಡ್ಯ: ಗಂಡಸ್ತನದ ವಿಚಾರಕ್ಕೆ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸಾಗರ್ ಕೊಲೆಗೀಡಾದ ಯುವಕ. ಸಾಗರ್ ತನ್ನ ಸ್ನೇಹಿತ ಕುಂಟನಹಳ್ಳಿ ಪ್ರಸಾದ್‍ನ ಬರ್ತಡೇ ಪಾರ್ಟಿಗೆ ಕೊಪ್ಪದ ಸಿಂಚನ ಡಾಬಾಗೆ ಕಳೆದ ವಾರ ಹೋಗಿದ್ದನು. ಕೇಕ್ ಕಟ್ ಮಾಡಿಸಿ ನಂತರ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾನೆ. ಪಾರ್ಟಿ ಮುಗಿಸಿದ ಮೇಲೆ ಜೊತೆಯಲ್ಲಿದ್ದ ಸ್ನೇಹಿತರೇ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಚಾಕುವಿನಂದ ಚುಚ್ಚಿ ಪರಾರಿಯಾಗಿದ್ದಾರೆ.
ಸಾಗರ್‌ನನ್ನು ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಆತನ ಸ್ನೇಹಿತರಾದ ಹುರುಗಲವಾಡಿ ಗಿರಿ, ಪುನೀತ್, ರಾಕೇಶ್. ಈ ಹಿಂದೆ ಗಿರಿ ಸಣ್ಣ ಜಗಳದಲ್ಲಿ ಕೊಪ್ಪದವರು ಗಂಡಸರಲ್ಲಾ ಎಂದು ಬೈದಿದ್ದನು. ಇದೇ ವಿಚಾರ ಪಾರ್ಟಿಯಲ್ಲಿ ಪ್ರಸ್ತಾಪವಾದ ವೇಳೆ ಸಾಗರ್ ಗಂಡಸ್ತನದ ಬಗ್ಗೆ ಹೇಳ್ತೀಯಾ ಎಂದು ಗಿರಿ ಜೊತೆ ಏರು ಧ್ವನಿಯಲ್ಲಿ ಗದರುತ್ತಾನೆ.
ಈ ವೇಳೆ ಪಾರ್ಟಿಯ ಮತ್ತಿನಲಿದ್ದ ಗಿರಿ ಮತ್ತು ಸಾಗರ್ ನಡುವೆ ಜೋರಾಗಿ ಜಗಳವಾಗುತ್ತದೆ. ಕೊನೆಗೆ ಗಿರಿ ಜೊತೆ ಇದ್ದ ಪುನೀತ್ ಮತ್ತು ರಾಕೇಶ್ ಆತನನ್ನು ಹಿಡಿದುಕೊಳ್ಳುತ್ತಾರೆ. ಈ ವೇಳೆ ಚಾಕು ತೆಗೆದುಕೊಂಡು ಗಿರಿ ಸಾಗರ್‍ನ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಚುಚ್ಚಿ ಪರಾರಿಯಾಗಿದ್ದರು.