ಗುತ್ತಲ: ದರೋಡೆ ಆರೋಪದ ಮೇಲೆ ಆರು ಮಂದಿಯನ್ನು ಗುತ್ತಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮಧ್ಯರಾತ್ರಿ ರಾಣೆಬೆನ್ನೂರ ಕಡೆಯಿಂದ ಗುತ್ತಲ ಕಡೆಗೆ ಬರುತ್ತಿದ್ದ ಬೊಲೆರೊ ವಾಹನವನ್ನು ಪಟ್ಟಣದ ಹೊರವಲಯದ ಕುರಗೂಂದ ಕ್ರಾಸ್ ಹತ್ತಿರ ತಡೆದು ಪರಿಶೀಲನೆ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಶಿವರಾಜ ಮೊಡಿಕಾರ, ಪರಶುರಾಮ ಮೊಡಿಕಾರ, ಚಿರಂಜೀವಿ ಮೊಡಿಕೇರ, ಗಾಳೇಪ್ಪ ನಾಸಿಕ್, ಗುಡದಯ್ಯ ಮೊಡಿಕೇರ ಬಂಧಿತರು. ಮಚ್ಚು, 2 ಬಡಿಗೆ, ಕಾರದಪುಡಿ ಹಾಗೂ ವಾಹನ ವಶಪಡಿಸಿಕೊಳ್ಳಲಾಗಿದೆ.
ಪಟ್ಟಣದಲ್ಲಿ ನಡೆದ ದರೋಡೆ ಪ್ರಕರಣಗಳಲ್ಲಿ ಆರೋಪಿಗಳ ಪಾತ್ರವಿದೆ. ಇಂತಹ ಇನ್ನೊಂದು ತಂಡವನ್ನು ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಿಎಸ್‌ಐ ಜಿ. ಜಗದೀಶ ತಿಳಿಸಿದರು.