Breaking News

‘ಮೋದಿ ಕ್ಯಾಂಟಿನ್’ ತೆರೆದ ಮಾಜಿ ಐಎಎಸ್ ಶಿವರಾಮ್

Spread the love

K. Shivram: 2013ರಲ್ಲಿ ಕಾಂಗ್ರೆಸ್​ ಪಕ್ಷ ಸೇರಿದ್ದ ಕೆ ಶಿವರಾಮ್, ಆರು ತಿಂಗಳಿಗೇ ಕಾಂಗ್ರೆಸ್​ ಪಕ್ಷಕ್ಕೆ ಗುಡ್​ಬೈ ಹೇಳಿ, ಜೆಡಿಎಸ್ ಸೇರ್ಪಡೆಯಾದರು. 2014ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಮುಂದೆ 2016ರಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಮಾಜಿ ಐಎಎಸ್ ಅಧಿಕಾರಿ, ಸಿನಿ ನಟ ಮತ್ತು ಹಾಲಿ ರಾಜಕಾರಣಿ ಶಿವರಾಮು ಕೆ (ಶಿವರಾಮು ಕೆಂಪಯ್ಯ- ಕೆ ಶಿವರಾಮ್) ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ. ಮೂಲತಃ ರಾಮನಗರ ಜಿಲ್ಲೆಯ ಕೆ ಶಿವರಾಂ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ ವಿಧಾನಸಭಾ ಕ್ಷೇತ್ರದಲ್ಲಿ ಸಜ್ಜಾಗಿದ್ದಾರೆ. ಆಡಳಿತಾರೂಢ ಬಿಜೆಪಿ ಪಕ್ಷದ (BJP) ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಬಗ್ಗೆ ಪಕ್ಷವಿನ್ನೂ ಅಧಿಕೃತ ಘೋಷಣೆ ಮಾಡಿಲ್ಲವಾದರೂ ಕೆ ಶಿವರಾಮ್ (K. Shivram) ಕ್ಷೇತ್ರದಲ್ಲಿ ಅದಾಗಲೇ ಸಕ್ರಿಯರಾಗಿದ್ದಾರೆ. ಬೆಂಗಳೂರು ವಿವಿ ಪುರಂ ಸಂಜೆ ಕಾಲೇಜಿನಲ್ಲಿ ಬಿಎ ಪದವಿ, ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಎಂಎ ಸ್ನಾತಕೋತ್ತರ ಪದವಿ ಗಳಿಸಿರುವ ಕೆ ಶಿವರಾಮ್, ಕನ್ನಡ ಭಾಷೆಯಲ್ಲಿ IAS Exam ಬರೆದು, ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ಇತ್ತೀಚೆಗೆ ಒಂದು ಹೆಜ್ಜೆ ಮುಂದೆ ಹೋಗಿರುವ ಕೆ ಶಿವರಾಮ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲಿ ‘ಮೋದಿ ಕ್ಯಾಂಟಿನ್’ ಆರಂಭಿಸಿದ್ದಾರೆ. ಇದು ಕ್ಷೇತ್ರದ (Anekal Assembly) ಬಡ ಹಾಗೂ ಮಧ್ಯಮ ಕಾರ್ಮಿಕರು, ಜನಸಾಮಾನ್ಯರು, ರೈತರು ರಿಕ್ಷಾ ಡ್ರೈವರ್​​, ದಿನಗೂಲಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳ ಸೇವೆಗಾಗಿ ಮೀಸಲಾಗಿದೆ. ಆನೇಕಲ್ ತಾಲೂಕು ಕಚೇರಿ ಬಳಿ ಈ ಕ್ಯಾಂಟಿನ್ ಸೇವೆ ಒದಗಿಸಲಿದೆ.

ಮಾಜಿ ಐಎಎಸ್ ಕೆ ಶಿವರಾಮ್ ಅವರ ಹೊಸ ಪ್ರಯತ್ನ ಕಂಡು ಸ್ಥಳೀಯವಾಗಿ ಜನ ಅಮ್ಮಾ ಕ್ಯಾಂಟಿನ್, ಇಂದಿರಾ ಕ್ಯಾಂಟಿನ್, ಅಪ್ಪಾಜಿ ಕ್ಯಾಂಟಿನ್ ಆಯ್ತು ಇದೀಗ ಮೋದಿ ಕ್ಯಾಂಟಿನ್ (Modi Canteen) ಚಾಲ್ತಿಗೆ ಬಂದಿದೆ. 


Spread the love

About Laxminews 24x7

Check Also

ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ

Spread the love ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ ಮೈಸೂರು: ಕನ್ನಡಕ್ಕೆ ಮೊದಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ