ಬೆಂಗಳೂರು: ತಡರಾತ್ರಿ ಸ್ಯಾಂಡಲ್‌ವುಡ್ ನಟರೊಬ್ಬರು ಕುಡಿದ ಮತ್ತಿನಲ್ಲಿ ನಗರದ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.ಹರ್ಷ ಕಿರಿಕ್ ಮಾಡಿಕೊಂಡ ನಟ. ರಾತ್ರಿ ಜಾಲಹಳ್ಳಿ ಮುಖ್ಯರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್ ಮುಂಭಾಗ ಗೆಳೆಯರೊಂದಿಗೆ ನಟ ಹರ್ಷ ಕುಡಿಯುತ್ತಿದ್ದರು.
ಅಪಾರ್ಟ್‌ಮೆಂಟ್ ಮುಂದೆ ಕುಡಿಯುತ್ತಿರುವ ವಿಚಾರ ತಿಳಿದು ರಾತ್ರಿ ಬೀಟ್‌ನಲ್ಲಿದ್ದ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಕುಡಿದು ಇಲ್ಲಿ ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಹರ್ಷ ಮತ್ತು ಗೆಳೆಯರು ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
“ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ, ನಮಗೆ ದೊಡ್ಡ ವ್ಯಕ್ತಿಗಳ ಪರಿಚಯವಿದೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಅವಾಜ್ ಹಾಕಿದ್ದಾರೆ. ಕಿರಿಕ್ ಮಾಡಿದ ಕೂಡಲೇ ಪೊಲೀಸರು ಸ್ನೇಹಿತರ ಜೊತೆ ಹರ್ಷರನ್ನು ವಶಕ್ಕೆ ಪಡೆದು ಕಾರಿನಲ್ಲಿ ಕುಳ್ಳಿರಿಸಿ ಠಾಣೆಗೆ ಕರೆ ತಂದು ಬಿಸಿ ಮುಟ್ಟಿಸಿದ್ದಾರೆ.
ರಾಜಾಹುಲಿ, ವರ್ಧನ ಸೇರಿದಂತೆ ಹಲವು ಚಿತ್ರಗಳಲ್ಲಿ ಹರ್ಷ ನಟಿಸಿದ್ದಾರೆ.