ಬೆಂಗಳೂರು: ಡಿಕೆಶಿ ಜೊತೆ ತೊಡೆ ತಟ್ಟಿದವರೆಲ್ಲ ಈಗ ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದು, ತನ್ನ ವಿರುದ್ಧ ತೊಡೆ ತಟ್ಟಿದವರನ್ನು ಎಕ್ಸ್ ಪೋಸ್ ಮಾಡಲು ಡಿಕೆ ಶಿವಕುಮಾರ್ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಈ ಮೊದಲ ರಾಜಕೀಯವಾಗಿ ನಾಯಕರ ಮಧ್ಯೆ ಆರೋಪ, ಪ್ರತ್ಯಾರೋಪ, ವಾಗ್ದಾಳಿ ನಡೆಯುತ್ತಿದ್ದವು. ಆದರೆ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ʼಸವಾಲಿಗೆ ಜವಾಬ್ʼ ಎಂಬ ಪೊಲಿಟಿಕ್ಸ್ ಶುರುವಾಗಿದೆ.
ಸವಾಲಿಗೆ ಜವಾಬ್ʼ ಹೋರಾಟದಲ್ಲಿ ಕಾಕತಾಳಿಯವೋ ತಂತ್ರಗಾರಿಕೆಯೋ ಗೊತ್ತಿಲ್ಲ. ಆದರೆ ಡಿಕೆಶಿ ಈ ಹೋರಾಟದಲ್ಲಿ ಜಯವನ್ನು ಸಾಧಿಸುತ್ತಿದ್ದಾರೆ.
ವಿಧಾನಸಭಾ ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಅವರನ್ನು ಚುನಾವಣೆ ಅಖಾಡದಲ್ಲಿ ಸೋಲಿಸುವುದಾಗಿ ಡಿಕೆಶಿ ಶಪಥ ಮಾಡಿದ್ದರು. ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಸೋತರೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಜಯಗಳಿಸಿದ್ದರು.