ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಗರದ ಹಲವೆಡೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ ಉಂಟಾಗಿದೆ. ಭಾರೀ ಗಾತ್ರದ ಮರಗಳೂ ವರುಣ ಆರ್ಭಟಕ್ಕೆ ಧರೆಗುರುಳಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಗರಪಾಲಿಕೆ ಮುಂದಾಗಿದೆ.ಕೆಲ ದಿನಗಳಿಂದ ಕೊಂಚ ಬಿಡುವು ನೀಡಿದ್ದ ವರುಣ ಮತ್ತೆ ತನ್ನ ಆರ್ಭಟ ಮುಂದುವರಿಸಿದೆ. ನಿನ್ನೆ ಬೆಂಗಳೂರಿನಲ್ಲಿ ಸೃಷ್ಟಿಸಿದ ಅವಾಂತರಗಳು ಇದಕ್ಕೆ ಸಾಕ್ಷಿಯಾಗಿದೆ. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಯಾಗಿವೆ.
ಪ್ರಶಾಂತ್ ನಗರ, ಶೋಭಾ ಆಸ್ಪತ್ರೆ ಬಳಿ, ಶ್ರೀರಾಂಪುರ, ಕೆ.ಜಿ.ರಸ್ತೆ ಗಾಂಧಿನಗರ, ಲಿಂಕ್ ರೋಡ್ ಮಲ್ಲೇಶ್ವರ, ಸುಬ್ರಮಣ್ಯನಗರ ಹಾಗೂ ರಾಜಾಜೀನಗರದಲ್ಲಿ ತಲಾ ಒಂದೊಂದು ಮರಗಳು ನೆಲಕಚ್ಚಿದ್ದವು. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು.