ಮೈಸೂರು,: ‘ಟಿಕೆಟ್ ಯಾರಿಗೆ ಕೊಡಬೇಕು ಮತ್ತು ಬಿಡಬೇಕು ಎಂಬುದು ಗೊತ್ತಿದೆ. ಟಿಕೆಟ್ ಕೊಡುವ ಮುನ್ನ ಎಲ್ಲರ ಅಭಿಪ್ರಾಯ ಸಲಹೆ ಪಡೆಯಲಾಗುತ್ತಿದೆ. ನಮ್ಮ ಕಡೆಯವರಿಗೆ ಟಿಕೆಟ್ ಕೊಡಬೇಕೆಂದು ಸೆರಗು, ಪಂಚೆ ಹಿಡಿದುಕೊಂಡು ಬೆಂಗಳೂರಿಗೆ ಬರುವುದು ಬೇಡ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.
ಸಂತೋಷ್ ಎಚ್ಚರಿಕೆ ನೀಡಿದರು.
ನಗರದ ಖಾಸಗಿಹೋಟೆಲ್‍ನಲ್ಲಿ ದಕ್ಷಿಣ ಪದವೀಧರರ ಕ್ಷೆತ್ರದ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪ್ರಮುಖ ನಾಯಕರುಗಳ ಸಭೆ ನಡೆಸಿ ಅವರು ಮಾತನಾಡಿದ ಅವರು, ‘ಜನರೊಡನೆ ಬೆರೆತು ಕೆಲಸ ಮಾಡುವವರ ಸಾಮರ್ಥ್ಯ ನೋಡಿ ಟಿಕೆಟ್ ಕೊಡಲಾಗುತ್ತದೆ. ಜನರೊಂದಿಗೆ ಬೆರೆಯದವರು ಬೆಂಗಳೂರಿಗೆ ಬರುವುದೇ ಬೇಡ’ ಎಂದರು.
‘ಕಳೆದ 32 ವರ್ಷಗಳಿಂದ ಒಂದೇ ಕುಟುಂಬದಲ್ಲಿ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಕಾಂಗ್ರೆಸ್ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದಕ್ಕೆ ದೇಶದಲ್ಲಿ ನಾಮಾವೇಷ ಸ್ತಿತಿಗೆ ತಲುಪಿದ್ದರೆ, ಜಾ.ದಳ, ಆರ್.ಜೆ.ಡಿ.ಶಿವಸೇನಾ, ಟಿಎಂಸಿ, ಸಮಾಜವಾದಿ ಪಾರ್ಟಿ ಹೀಗೆ ಅನೇಕ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಹಾಸು ಹೊಕ್ಕಾಗಿದೆ. ಬಿಜೆಪಿ ಬದಲಾವಣೆಗೆ ಒಗ್ಗೂಡಿಕೊಂಡು ರಾಜಕಾರಣ ಮಾಡಿಕೊಂಡು ಬಂದಿರುವುದರಿಂದ ಮತ್ತೆ ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಗಿದೆ’ ಎಂದು ಹೇಳಿದರು.