Breaking News

ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

Spread the love

ಧಾರವಾಡ: ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ

ಪೀರಸಾಬ್ ನದಾಫ (38) ಪತ್ನಿ ಹಾಗೂ ಆಕೆಯ ಪ್ರಿಯಕರನಿಂದ ಕೊಲೆಯಾದವನು. ಕಳೆದ ಮೂರು ವರ್ಷಗಳಿಂದ ಪೀರಸಾಬ್ ನದಾಫ ಪತ್ನಿ ಪರ್ವಿನ್ ಬಾನುಗೆ ಸೋಮಯ್ಯ ಪೂಜಾರ ಜೊತೆ ಅನೈತಿಕ ಸಂಬಂಧ ಇತ್ತು. ಇದೇ ವಿಷಯವಾಗಿ ಪತಿ ಪೀರಸಾಬ್ ಹಾಗೂ ಪತ್ನಿ ಪರ್ವಿನ್ ಬಾನು ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು ಎಂದು ತಿಳಿದು ಬಂದಿದೆ.

ಕಳೆದ 8 ದಿನಗಳ ಹಿಂದೆ ಪೀರಸಾಬ್ ಏಕಾಎಕಿ ನಾಪತ್ತೆಯಾಗಿದ್ದ. ಪೀರಸಾಬ ತಾಯಿ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಕಳೆದ ಮೂರು ದಿನಗಳ ಹಿಂದೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ದರು. ನಂತರ ಧಾರವಾಡ ಗ್ರಾಮೀಣ ಪೊಲೀಸರು ಪೀರಸಾಬ್ ಬಗ್ಗೆ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಆಗ ಪತ್ನಿ ಮತ್ತು ಆತನ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಪೀರಸಾಬ್ ನನ್ನು ಕೊಲೆ ಮಾಡಿದ ನಂತರ ಬೆಳಗಾವಿ ಜಿಲ್ಲೆಯ ಎಂಕೆ ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿಗೆ ಎಸೆದಿದ್ದಾರೆ. ಸದ್ಯ ಪೊಲೀಸರು ಕೊಲೆಯಾದವನ ಶವ ಪತ್ತೆ ಹಚ್ಚಿ ಮೂವರನ್ನ ಬಂಧಿಸಿದ್ದಾರೆ.

ಕೊಲೆಯಲ್ಲಿ ಮತ್ತೊಬ್ಬ ಆರೋಪಿಯಾದ ಮಲ್ಲಿಕಾರ್ಜುನ ಮಡಿವಾಳರ ಕೂಡ ಭಾಗಿಯಾಗಿದ್ದ. ಕೊಲೆಯ ಮಾಡುವ ಮೊದಲು ಆರೋಪಿ ಪತ್ನಿಯೇ ಪತಿಗೆ ಮದ್ಯ ಕುಡಿಸಿದ್ದಳು. ಸದ್ಯ ಗ್ರಾಮೀಣ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ- ಧಾರವಾಡ ಮಧ್ಯೆ ಮೆಟ್ರೋ ಮಾದರಿ ಸಾರಿಗೆ ಯೋಜನೆ ಒಡಂಬಡಿಕೆ

Spread the loveಹುಬ್ಬಳ್ಳಿ, ಏಪ್ರಿಲ್​ 12: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ವಿದ್ಯುತ್‌ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ (Electric Rapid …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ