Breaking News

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ

Spread the love

ನವದೆಹಲಿ: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 102.50 ರೂಪಾಯಿ ಹೆಚ್ಚಳ ಮಾಡಿದ್ದು, 2,355.50ರೂ. ಏರಿಕೆ ಕಂಡಿದೆ. ಆದರೆ ಗೃಹ ಉಪಯೋಗಿ ಸಿಲಿಂಡರ್ ಮೇಲೆ ಯಾವುದೇ ದರ ಏರಿಕೆ ಆಗಿಲ್ಲ.

ಒಂದು ತಿಂಗಳ ಹಿಂದೆ ವಾಣಿಜ್ಯ ಹಾಗೂ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಪರಿಷ್ಕರಿಸಿತ್ತು. ಏಪ್ರಿಲ್ 1ರಂದು ಎಲ್‍ಪಿಜಿ ಬೆಲೆಯು 250ರೂ. ಏರಿಕೆಯಾಗಿ 2,253ರೂ. ಹೆಚ್ಚಳವಾಗಿತ್ತು. ಎಲ್‍ಪಿಜಿ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸುವ ಶಿಷ್ಟಾಚಾರವನ್ನು ಅನುಸರಿಸಲಾಗುತ್ತಿದೆ. ಸದ್ಯ 14.2 ಕೆ.ಜಿ ತೂಕದ ಸಿಲಿಂಡರ್‌ ದರವು ಬೆಂಗಳೂರಿನಲ್ಲಿ 952 ರೂ. ಇದೆ.ಗೃಹ ಬಳಕೆ ಸಿಲಿಂಡರ್ ದರವನ್ನು ಮಾರ್ಚ್ 22ರಂದು 50ರೂ. ಹೆಚ್ಚಿಸಲಾಗಿತ್ತು. ಇದೀಗ ಇಂದಿನಿಂದ ಕಮರ್ಷಿಯಲ್ ಸಿಲಿಂಡರ್ ಮೇಲೆ 102 ರೂಪಾಯಿ ಹೆಚ್ಚಳ ಮಾಡಲಾಗಿದೆ. 19 ಕೆಜಿ ತೂಕದ ಕಮರ್ಷಿಯಲ್ ಸಿಲಿಂಡರ್‌ಗೆ ಮೇ 1 ರಿಂದ 102 ರೂಪಾಯಿ ದರ ಏರಿಕೆ ಆಗಿದೆ. ಇದು ಇಂದಿನಿಂದಲೇ ಜಾರಿಯಾಗಿದ್ದು, ಸದ್ಯ ಕಮರ್ಷಿಯಲ್ ಸಿಲಿಂಡರ್ ಬೆಲೆ 2,355.50 ರೂಪಾಯಿ ಇದೆ. ಜೊತೆಗೆ ಗೃಹ ಉಪಯೋಗಿ ಸಿಲಿಂಡರ್ ಮೇಲೆ ಯಾವುದೇ ದರ ಏರಿಕೆ ಆಗಿಲ್ಲ.


Spread the love

About Laxminews 24x7

Check Also

ಕೇಂದ್ರ ಬಜೆಟ್ ಸ್ವಾಗತಿಸಿದ FKCCI ಅಧ್ಯಕ್ಷೆ ಉಮಾ ರೆಡ್ಡಿ

Spread the loveಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟವು 2026–27ರ ಕೇಂದ್ರ ಬಜೆಟ್ ಅನ್ನು ಸ್ವಾಗತಿಸಿದ್ದು, ಇದು ಹಣಕಾಸಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ