Breaking News

ಗೂಗಲ್ ಸರ್ಚ್‌ನಿಂದ ಫೋನ್ ನಂಬರ್ ತೆಗೆಯಲು ಅವಕಾಶ

Spread the love

ಆಲ್ಫಬೆಟ್ ಒಡೆತನದ ಗೂಗಲ್, ಇಂಟರ್‌ನೆಟ್ ಸರ್ಚ್‌ನಿಂದ ಬಳಕೆದಾರರ ಫೋನ್ ನಂಬರ್, ಮನೆಯ ವಿಳಾಸ ಮತ್ತು ಇ-ಮೇಲ್ ವಿವರ ಸಹಿತ ಪ್ರಮುಖ ಮಾಹಿತಿಗಳನ್ನು ತೆಗೆದುಹಾಕುವಂತೆ ಕೋರಿಕೆ ಸಲ್ಲಿಸಿದರೆ, ಅದಕ್ಕೆ ಪ್ರತಿಯಾಗಿ ಸೂಕ್ತ ಕ್ರಮ ಕೈಗೊಳ್ಳಲಿದೆ.

ಬಳಕೆದಾರರ ಖಾಸಗಿತನ ಮತ್ತು ಮಾಹಿತಿ ಹಂಚುವಿಕೆ ಕುರಿತಂತೆ ಗೂಗಲ್, ಹೊಸ ಆಯ್ಕೆಗಳನ್ನು ಒದಗಿಸುತ್ತಿದೆ.

 

ಈ ಮೊದಲು ಗೂಗಲ್, ವೆಬ್‌ಪೇಜ್‌ಗಳು ಮತ್ತು ಅದರಲ್ಲಿ ಹಂಚಿಕೊಳ್ಳಲಾದ ಕೆಲವೊಂದು ಫೋಟೊ, ವಿಡಿಯೊಗಳನ್ನು ತೆಗೆದುಹಾಕುವಂತೆ ಕೋರಿಕೊಂಡರೆ ಅದಕ್ಕೆ ಮಾತ್ರ ಸಮ್ಮತಿಸುತ್ತಿತ್ತು. ಆದರೆ ಇದೀಗ, ಬಳಕೆದಾರರ ಫೋನ್ ನಂಬರ್, ಮನೆ ವಿಳಾಸ ಗೂಗಲ್‌ನಲ್ಲಿದ್ದು, ಅದನ್ನು ತೆಗೆದುಹಾಕುವಂತೆ ಕೋರಿಕೊಂಡರೆ, ಪೂರಕವಾಗಿ ಸಮ್ಮತಿಸಲಿದೆ.

ಬಳಕೆದಾರರಿಗೆ ಆನ್‌ಲೈನ್‌ನಲ್ಲಿ ಸುರಕ್ಷಿತ ಮತ್ತು ಖಾಸಗಿತನವನ್ನು ಒದಗಿಸುವುದು ಕಂಪನಿಯ ಗುರಿಯಾಗಿದೆ ಎಂದು ಗೂಗಲ್ ತಿಳಿಸಿದೆ.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ