Breaking News

ಸರಿಯಾದ ಸಮಯಕ್ಕೆ ವರ ಬರಲಿಲ್ಲ ಅಂತಾ ಅದೇ ಮದುವೆ ಮಂಟಪದಲ್ಲಿ ಬೇರೊಬ್ಬನನ್ನು ವರಿಸಿದ ವಧು!

Spread the love

ಮುಂಬೈ: ಸರಿಯಾದ ಸಮಯಕ್ಕೆ ವರ ಬರಲಿಲ್ಲ ಅಂತಾ ವಧು ಬೇರೊಬ್ಬನ ಜತೆ ವಿವಾಹವಾಗಿರುವ ವಿರಳಾತಿವಿರಳ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.

ಮದುವೆ ಸಮಾರಂಭವು ಏಪ್ರಿಲ್​ 22ರಂದು ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್​ ಪಂಗ್ರಾ ಗ್ರಾಮದಲ್ಲಿ ನಿಗದಿಯಾಗಿತ್ತು.

ಮದುವೆಗಾಗಿ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗಿತ್ತು. ಸಂಜೆ 4 ಗಂಟೆಗೆ ಮದುವೆ ನಡೆಯಬೇಕಿತ್ತು. ಆದರೆ, ಸಮಯವಾದರೂ ವರ ಮಾತ್ರ ಬರಲೇ ಇಲ್ಲ.

ವಧು ಮತ್ತು ಆಕೆಯ ಕುಟುಂಬ ಸಾಕಷ್ಟು ಕಾದರೂ ಮದುಮಗನ ಸುಳಿವೇ ಸಿಗಲಿಲ್ಲ. ಸಮಯ 8 ಗಂಟೆ ಆಯಿತು. ನೋಡೋವರೆಗೂ ನೋಡಿ ಕೊನೆಗೆ ವಧುವಿನ ತಂದೆ ತಮ್ಮ ಸಂಬಂಧಿಕರಲ್ಲಿ ಒಬ್ಬರಿಗೆ ಮಗಳನ್ನು ಕೊಟ್ಟು ಅದೇ ಮಂಟಪದಲ್ಲಿ ಮದುವೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಧುವಿನ ತಾಯಿ, ನಾವು 8 ಗಂಟೆಯವರೆಗೂ ಕಾದೆವು. ಆ ಬಳಿಕ ಮದುವೆ ಮಂಟಪಕ್ಕೆ ಆಗಮಿಸಿದ ವರ ಪಾನಮತ್ತನಾಗಿದ್ದ. ತನ್ನ ಸ್ನೇಹಿತರ ಜತೆ ಸೇರಿಕೊಂಡು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿ ಮದ್ಯದ ಅಮಲಿನಲ್ಲೇ ಮಂಟಪಕ್ಕೆ ಬಂದಿದ್ದ. 4 ಗಂಟೆಯ ಬದಲು 8 ಗಂಟೆಗೆ ಬಂದಿದ್ದಲ್ಲದೆ, ನಮ್ಮೊಂದಿಗೆ ಜಗಳ ಆಡಲು ಆರಂಭಿಸಿದ. ಯಾಕೋ ಇದು ಸರಿಯಲ್ಲ ಅಂದುಕೊಂಡು ನಮ್ಮ ಸಂಬಂಧಿಕರಲ್ಲಿ ಒಬ್ಬರಿಗೆ ಮಗಳನ್ನು ಕೊಟ್ಟು ಅದೇ ಮಂಟಪದಲ್ಲಿ ಮದುವೆ ಮಾಡಿಕೊಟ್ಟೆವು ಎಂದು ಹೇಳಿದ್ದಾರೆ.

ಮದುವೆಗೆ ಮೊದಲೇ ಎಲ್ಲಾ ಸಿದ್ಧತೆಗಳು ನಡೆದಿದ್ದರಿಂದ, ವಧುವಿನ ತಂದೆ ನಂತರ ಮದುವೆಗೆ ಬಂದಿದ್ದ ಸಂಬಂಧಿಕರನ್ನು ಸಂಪರ್ಕಿಸಿ, ತನ್ನ ಮಗಳನ್ನು ಆತನಿಗೆ ಮದುವೆ ಮಾಡಿದರು. ಮದುವೆ ಸಮಾರಂಭವು ಏಪ್ರಿಲ್ 22 ರಂದು ನಡೆಯಬೇಕಿತ್ತು, ವರ ಹಾಗೂ ಆತನ ಕಡೆಯವರು ಡಾನ್ಸ್​ನಲ್ಲಿ ನಿರತರಾಗಿದ್ದರು. ಕಂಠಪೂರ್ತಿ ಕುಡಿದ್ದಿದ್ದರು. ಮದುವೆ ಸಮಯ ಸಂಜೆ 4 ಗಂಟೆಗೆ ಇತ್ತು ಆದರೆ, ಅವರು ರಾತ್ರಿ 8 ಗಂಟೆಗೆ ಸ್ಥಳಕ್ಕೆ ತಲುಪಿದರು. ಹಾಗಾಗಿ ನನ್ನ ಮಗಳನ್ನು ನನ್ನ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿದ್ದೇನೆ ಎಂದು ವಧುವಿನ ತಂದೆ ತಿಳಿಸಿದ್ದಾರೆ. 


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ