ಈ ವಿಡಿಯೋ ಸದ್ಯ ವೈರಲ್ ಆಗಿದೆ.ಕಾಶ್ಮೀರದಿಂದ ಆಗಾಗ್ಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವ ಟ್ವಿಟ್ಟರ್ ಬಳಕೆದಾರರಾದ ನಮ್ರತಾ, ಇದೀಗ ಹೂವು ಮಾರಾಟಗಾರನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಂಭಾಷಣೆಯನ್ನು ಹೂ ಮಾರಾಟಗಾರ ಮರುಸೃಷ್ಟಿಸಿದ್ದಾರೆ. ಯಾರೋ ಪುಷ್ಪಾ ಅವರನ್ನು ಹೂವು ಎಂದು ತಪ್ಪಾಗಿ ಗ್ರಹಿಸಿದ್ದಾರೆ, ಪುಷ್ಪ ಅಂದ್ರೆ ಅಗ್ನಿ ಎಂಬ ಸಂಭಾಷಣೆಯನ್ನು ಅವರು ಮರುಸೃಷ್ಟಿಸಿದ್ದಾರೆ..
ಸುಂದರವಾದ ದಾಲ್ ಸರೋವರದ ಮುಂದೆ, ವರ್ಣರಂಜಿತ ಹೂವುಗಳಿಂದ ತುಂಬಿದ ಶಿಕಾರದಲ್ಲಿ ಹೂವು ಮಾರಾಟಗಾರ ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರದ ಸಂಭಾಷಣೆಯನ್ನು ಹೇಳಿದ್ದಾರೆ. ಇದೀಗ, ಕಾಶ್ಮೀರಿ ಹೂವು-ಮಾರಾಟಗಾರನ ಪುಷ್ಪಾ ವಿಡಿಯೋವನ್ನು ಇಂಟರ್ನೆಟ್ ಆನಂದಿಸಿದ್ದು, ಅದು ವೇಗವಾಗಿ ವೈರಲ್ ಆಗುತ್ತಿದೆ.
Flower Nahi, Fire Hai Mein!#Kashmir #Kashmiris pic.twitter.com/fun5CDrF2U
— SrinagarGirl (@SrinagarGirl) April 27, 2022
Laxmi News 24×7