Breaking News

ಸಿನಿಮೀಯ ಶೈಲಿಯಲ್ಲಿ ಹುಬ್ಬಳ್ಳಿ ಗಲಭೆಯ ಆರೋಪಿಗಳ ಬಂಧನ

Spread the love

ಹುಬ್ಬಳ್ಳಿ ಪೊಲೀಸರು ಇಬ್ಬರು ಗಲಭೆ ಆರೋಪಿಗಳನ್ನು ಬೆಂಗಳೂರಿನ ಕಾಟನ್​ಪೇಟೆ ಹೊಟೆಲ್​ನಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದರು. ಇವರ ಚಲನವಲನ ಕಂಡು ಹಿಂಬಾಲಿಸಿದ್ದ ಹುಬ್ಬಳ್ಳಿ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ಸುತ್ತುವರೆದಿದ್ದರು.

ಆರೋಪಿಗಳು ಹಿಂದಕ್ಕೆ ತಿರುಗಿದಾಗ ಹೆಗಲ ಮೇಲೆ ಕೈ ಹಾಕಿ ಬಿಗಿಯಾಗಿ ಹಿಡಿದುಕೊಂಡರು.

ಹುಬ್ಬಳ್ಳಿಯಿಂದ ತಪ್ಪಿಸಿಕೊಂಡು ಹೊರಟಿದ್ದ ನಾಲ್ವರು ಹಾವೇರಿಯ ಬಂಕಾಪುರ ಬಸ್​ಸ್ಟಾಪ್​ನಲ್ಲಿ ಇಳಿದು, ಅಲ್ಲಿಂದ ಬೇರೆಡೆಗೆ ಪರಾರಿಯಾಗಿದ್ದರು.

ಇನ್ನಿಬ್ಬರು ಬೆಂಗಳೂರಿನತ್ತ ಪ್ರಯಾಣ ಮಾಡಿದ್ದರು. ರೌಡಿಶೀಟರ್ ಅಬ್ದುಲ್ ಮಲ್ಲಿಕ್ ಬೇಫಾರಿ ಹಾಗೂ ತುಫೇಲ್ ಮುಲ್ಲಾ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬುಧವಾರ ಬೆಳಿಗ್ಗೆ ರಂಜಾನ್​ಗೆಂದು ಬಟ್ಟೆ ಖರೀದಿ ಮಾಡಿದ್ದ ಆರೋಪಿಗಳು.

ಸಂಜೆಯ ನಂತರ ತವಕಲ್ ಮಸೀದಿ ಬಳಿ ಇದ್ದ ಲಾರ್ಡ್​ನಲ್ಲಿ ಕೊಠಡಿ ಬುಕ್ ಮಾಡಿದ್ದರು. ಹೋಟೆಲ್​ಗೆ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಷ್ಟರಲ್ಲಾಗಲೆ ಹುಬ್ಬಳ್ಳಿಯಿಂದ ಬಂದಿದ್ದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳೀಯ ಡಿಸಿಪಿ ಸಂಜೀವ್ ಪಾಟೀಲ್​ಗೆ ವಿವರ ನೀಡಿದ ಅವರು, ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಿದರು.


Spread the love

About Laxminews 24x7

Check Also

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

Spread the loveನವದೆಹಲಿ: 4 ರಾಜ್ಯ  ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಅಸ್ಸಾಂ, ತಮಿಳುನಾಡು,ಕೇರಳ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ