Breaking News

ಅರಗ ಜ್ಞಾನೇಂದ್ರಗೆ ಕೊಕ್‌? ಯಾರಾಗ್ತಾರೆ ಹೋಂ ಮಿನಿಸ್ಟರ್‌?

Spread the love

ಸಂಪುಟ ಪುನರ್‌ ರಚನೆ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವ್ರ ಖಾತೆ ಬದಲಾಯಿಸಲಾಗುತ್ತೆ ಅನ್ನೋ ಗುಸುಗುಸು ಸುದ್ದಿ ಬಿಜೆಪಿ ಪಾಳಯದಲ್ಲಿ ಎದ್ದಿದೆ. ಜೊತೆಗೆ ಅನುಭವಿ ಆರ್‌. ಅಶೋಕ್‌ ಅವ್ರಿಗೆ ಮರಳಿ ಗೃಹಖಾತೆ ನೀಡ್ಬಹುದು ಅಂತ ಕೂಡ ಹೇಳಲಾಗ್ತಿದೆ.

ಅಂದ್ಹಾಗೆ ಆರಗ ಜ್ಞಾನೇಂದ್ರ ಕೂಡ ಬಿಜೆಪಿಯಲ್ಲಿ ಹಿರಿಯರು. ಆದರೆ, ಮೊದಲ ಬಾರಿಗೆ ಸಚಿವರಾಗಿರುವ ಅವರಿಗೆ ಅತ್ಯಂತ ಮಹತ್ವದ ಖಾತೆ ವಹಿಸಲಾಗಿದೆ. ಗೃಹ ಸಚಿವರಾದವರು ಖಡಕ್‌ ಹಾಗೂ ಸೂಕ್ಷ್ಮ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವ ಜಾಣ್ಮೆ ಹೊಂದಿರಬೇಕಾಗುತ್ತದೆ. ಜ್ಞಾನೇಂದ್ರ ಮೃದು ಸ್ವಭಾವದವರು. ಜತೆಗೆ ಅನುಭವದ ಕೊರತೆಯೂ ಇದೆ ಎಂಬ ಅಭಿಪ್ರಾಯವಿದೆ. ಇದಕ್ಕೆ ಪುಷ್ಟಿ ನೀಡುವಂತೆ ಆರಗ ಜ್ಞಾನೇಂದ್ರ ಅವ್ರು ಕೂಡ ಗೃಹ ಸಚಿವರಾದ ಬಳಿಕ ಹೇಳಿಕೆಗಳಿಂದಲೇ ಸಾರ್ವಜನಿಕ ಮತ್ತು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುತ್ತಿದ್ದಾರೆ. ಇದು ಸರಕಾರಕ್ಕೂ ಮುಜುಗರ ತರುತ್ತಿದೆ. ಹಾಗಾಗಿ ಜ್ಞಾನೇಂದ್ರ ಅವರಿಗೆ ಗೃಹ ಇಲಾಖೆ ನೀಡುವಂತೆ ಈ ಹಿಂದೆ ಸಲಹೆ ಕೊಟ್ಟಿದ್ದ ಸಂಘ ಪರಿವಾರವೇ ಈಗ ಬೇರೆಯವರಿಗೆ ನೀಡಲು ಸೂಚಿಸುತ್ತಿದೆ ಎನ್ನಲಾಗಿದೆ. 


Spread the love

About Laxminews 24x7

Check Also

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP?*

Spread the love ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ