ಬಳ್ಳಾರಿ: ಕೊಳಚೆ ನೀರಲ್ಲಿ ಮುಳುಗಿ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೆ ವೀರಾಪುರ ಗ್ರಾಮದಲ್ಲಿ ನಡೆದಿದೆ.
ಕೆ.ವೀರಾಪುರ ಗ್ರಾಮದ ಬಸವರಾಜ್ ಹಾಗೂ ಜ್ಯೋತಿ ಅವರ ನಾಲ್ಕು ವರ್ಷದ ಸೋಮೇಶ್ ಮೃತ ಮಗುವಾಗಿದ್ದು, ಮನೆ ಎದುರು ಆಟವಾಡುತ್ತಿದ್ದ ವೇಳೆ ಕೊಳಚೆ ನೀರಲ್ಲಿ ಬಿದ್ದ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.
ಮನೆಯ ಮುಂಭಾಗದಲ್ಲಿ ಮಗು ಕಾಣದ ಹಿನ್ನೆಲೆ ತಾಯಿ ಹುಡುಕಾಟ ನಡೆಸಿದ್ದ ವೇಳೆ ಕೊಳೆಚೆ ನೀರಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.