ತುಮಕೂರು: ‘ಸರ್ ನಮ್ಮೂರಿಗೆ ರಸ್ತೆ ಇಲ್ಲ, ಮಾಡಿಸಿಕೊಡಿ’ ಎಂದು ಮನವಿ ಮಾಡಿಕೊಂಡ ಯುವಕನಿಗೆ ಪಾವಗಡದ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಕಪಾಳಮೋಕ್ಷ ಮಾಡಿದ್ದಾರೆ.
ಸಾರ್ವಜನಿಕರ ಎದುರೇ ಶಾಸಕರು ಕಪಾಳಮೋಕ್ಷ ಮಾಡಿದ್ದಾರೆ. ತಾಲೂಕು ಕಚೇರಿ ಆವರಣದಲ್ಲಿ ಈ ಪ್ರಸಂಗ ನಡೆದಿದ್ದು, ಸರ್ ನಮ್ಮೂರಿಗೆ ರಸ್ತೆ ಇಲ್ಲ.
ರಸ್ತೆ ಹದಗೆಟ್ಟು ಹೋಗಿದೆ. ಯಾರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನೀವಾದರೂ ರಸ್ತೆ ಮಾಡಿಸಿ ಸಾರಿಗೆ ವ್ಯವಸ್ಥೆ ಮಾಡಿಸಿಕೊಡಿ ಎಂದು ಯುವಕ ಮನವಿ ಮಾಡಿಕೊಂಡಿದ್ದಾನೆ.
ಇದಕ್ಕೆ ಕೋಪಗೊಂಡ ಶಾಸಕರು ಕಾಪಳಮೋಕ್ಷ ಮಾಡಿದ್ದಾರೆ. ಅಲ್ಲದೇ ನಿನ್ನದಷ್ಟು ಇದ್ಯೆ ಅಷ್ಟು ನೀನು ನೋಡಿಕೋ, ಊರಿನ ಸುದ್ದಿ ನಿಮಗೆ ಬೇಡ ಎಂದು ಶಾಸಕರು ಆವಾಜ್ ಹಾಕಿದ್ದಾರೆ.