Breaking News

ಇನ್ಮುಂದೆ ಮೌಖಿಕ ಆದೇಶದ ಮೇಲೆ ಯಾರೂ ಕಾಮಗಾರಿ ಮಾಡುವಂತಿಲ್ಲ : ಸಿಎಂ ಬೊಮ್ಮಾಯಿ, ‘

Spread the love

ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯಿಂದ ಹೆಚ್ಚಿತ್ತಿರುವ ರಾಜ್ಯ ಸರ್ಕಾರ, ಇನ್ಮುಂದೆ ಮೌಖಿಕ ಆದೇಶದ ಮೇಲೆ ಯಾರೂ ಕಾಮಗಾರಿ ಮಾಡುವಂತಿಲ್ಲ ಎಂದು ತಿಳಿಸಿದೆ.

ಶಿವಮೊಗ್ಗದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ‘ಲೋಕಲ್ ಬಾಂಡೀಸ್ʼನಲ್ಲಿ, ಪಂಚಾಯತ್ ರಾಜ್ ಬಾಂಡೀಸ್ʼನಲ್ಲೂ ಮೌಖಿಕ ಆದೇಶದ ಮೇಲೆ ಕೆಲಸಗಳು ನಡೆಯುತ್ತವೆ.

ಆದ್ರೆ, ನಾನು ಈಗಾಗ್ಲೇ ಪ್ರತಿ ಡಿಪಾರ್ಟ್ಮೆಂಟ್ʼಗೆ ಸೂಚನೆ ನೀಡಿದ್ದೇನೆ. ಯಾವುದೇ ಮೌಖಿಕ ಆದೇಶದ ಮೇಲೆ ಕೆಲಸದ ಕಾಮಗಾರಿ ಮಾಡಬಾರದು. ಒಂದ್ವೇಳೆ ಮಾಡಿದ್ರೆ, ಆ ಪ್ರಕ್ರಿಯೆಗೆ ಇಂಜಿನಿಯರ್ ಜವಬ್ದಾರಿಯಾಗುತ್ತಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಪಿಡಿಒ ಮತ್ತು ಇಓ ಜವವ್ದಾರಿಯಾಗುತ್ತಾರೆ. ಇನ್ಮುಂದೆ ಸ್ಪಷ್ಟವಾದ ರೈಟಿಂಗ್ʼನಲ್ಲಿಯೇ ಆದೇಶ ನೀಡಬೇಕಾಗುತ್ತೆ. ಕಾಮಗಾರಿ ಟೆಂಡರ್ ಸಂಬಂಧ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸುತ್ತಿದ್ದಾರೆ. ಇನ್ನೊಂದು ವಾರದಲ್ಲೇ ಈ ಆದೇಶ ಕೂಡ ಹೊರ ಬೀಳಲಿದೆ’ ಎಂದರು.


Spread the love

About Laxminews 24x7

Check Also

ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ 2:1ರ ಅನುಪಾತ: ಗೆಜೆಟ್ ಅಧಿಸೂಚನೆ ಪ್ರಕಟ

Spread the loveಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಗೆ ರಾಜ್ಯ ಸರ್ಕಾರವು ನಿಯಮಗಳನ್ನು ರೂಪಿಸಿ ಗೆಜೆಟ್ ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಪ್ರಾಥಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ